ಗರ್ಭಗುಡಿ ದುರಸ್ತಿ ಕಾರ್ಯಕ್ಕೆ ಸಹಕರಿಸಿ: ಮಲ್ಲಯ್ಯಚಳ್ಳಕೆರೆ: ತಾಲೂಕಿನ ಚನ್ನಮ್ಮನಾಗತಿಹಳ್ಳಿ ಗ್ರಾಮದ ಪುರಾತನ ದೇವಸ್ಥಾನವಾದ ಶ್ರೀ ಪಾತಲಿಂಗೇಶ್ವರಸ್ವಾಮಿ ಗರ್ಭಗುಡಿ ಶಿಥಿಲವ್ಯವಸ್ಥೆ ತಲುಪಿದ್ದು, ಅದನ್ನು ಕೂಡಲೇ ದುರಸ್ತಿಗೊಳಿಸುವ ಮಹತ್ತರ ಜವಾಬ್ದಾರಿ ಎಲ್ಲರ ಮೇಲಿದೆ. ಗರ್ಭಗುಡಿ ದುರಸ್ತಿ ಕಾರ್ಯಕ್ಕೆ ಸುಮಾರು ೩೦ ಲಕ್ಷ ವೆಚ್ಚವಾಗಲಿದ್ದು, ಗೊರವಿನಕೆರೆ ವಂಶಸ್ಥರೂ ಸೇರಿದಂತೆ ಸಮುದಾಯದ ಮುಖಂಡರು ಇದಕ್ಕೆ ಸಹಕಾರ ನೀಡಬೇಕೆಂದು ದೇವಸ್ಥಾನ ಸಮಿತಿ ಅಧ್ಯಕ್ಷ ಆರ್.ಮಲ್ಲಯ್ಯ ತಿಳಿಸಿದರು.