ಭಗವದ್ಗೀತೆ ಪಠಣ, ಅಧ್ಯಯನ ನಿರಂತರವಾಗಿರಲಿಭಗವಂತನ ನಾಮಸ್ಮರಣೆ ಪೂಜೆ, ಪುನಸ್ಕಾರ, ಹೋಮ, ಯಜ್ಞ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಿಂದ ನಾವು ದೇವರ ಅನುಗ್ರಹವನ್ನು ಪಡೆಯಬಹುದು. ಇಡೀ ವಿಶ್ವದಲ್ಲೇ ಹೆಚ್ಚು ಸಂಸ್ಕಾರ, ಸಂಸ್ಕೃತಿ ಹೊಂದಿದ ದೇಶ ಭಾರತ. ಭಾರತದಲ್ಲಿ ಮಾತ್ರ ನಾವು ಆಧ್ಯಾತ್ಮ ಬೋಧನೆ ಮತ್ತು ದೈವಶಕ್ತಿಯಿಂದ ದೇವರನ್ನು ಕಾಣುವ ಪ್ರಯತ್ನ ಮಾಡುತ್ತೇವೆ. ಈ ಸಾರ್ಥಕತೆಯನ್ನು ಪಡೆಯಲು ಭಗವದ್ಗೀತೆ ಪಠಣ ಮತ್ತು ಅದರ ಅಧ್ಯಯನ ನಿರಂತರವಾಗಿರಬೇಕೆಂದು ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ. ಅನಂತರಾಮಗೌತಮ್ ತಿಳಿಸಿದರು.