ಅಂಗವಿಕಲರಿಗೆ ಸಲಕರಣೆ ಪೂರೈಸಲು ರೆಡ್‌ಕ್ರಾಸ್ ಯೋಜನೆ: ಶಾಂತಾರಾಮ ಶೆಟ್ಟಿದ.ಕ. ಮತ್ತು ಉಡುಪಿ ಜಿಲ್ಲಾ ವಿಶಿಷ್ಟಚೇತನರ ಸಂಘ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದ.ಕ.ಜಿಲ್ಲಾ ಶಾಖೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್‌ಕ್ರಾಸ್ ಘಟಕದ ಆಶ್ರಯದಲ್ಲಿ ಭಾನುವಾರ ಹಂಪನಕಟ್ಟೆ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಸಂಘದ 32ನೇ ವಾರ್ಷಿಕ ಸಮಾವೇಶ, ಅಂಗವಿಕರಿಗೆ ವೈದ್ಯಕೀಯ ನೆರವು, ವೈದ್ಯಕೀಯ ತಪಾಸಣೆ ಮತ್ತು ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ನಡೆಯಿತು.