ಧರ್ಮವನ್ನು ಪಾಲಿಸಿದಾಗ ಮಾತ್ರವೇ ರಕ್ಷಣೆ ಸಾಧ್ಯ: ಹೊಂಬುಜ ಶ್ರೀವೇಣೂರು ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕದ ಮೂರನೆಯ ದಿನವಾದ ಶನಿವಾರ ಬೆಳಿಗ್ಗೆ ನಿತ್ಯವಿಧಿ ಸಹಿತ ಶ್ರೀ ಪೀಠ ಯಂತ್ರಾರಾಧನಾ ವಿಧಾನ, ಧ್ವಜ ಪೂಜೆ, ಶ್ರೀ ಬಲಿ ವಿಧಾನ, ಮಧ್ಯಾಹ್ನ ಯಂತ್ರಾರಾಧನಾ ವಿಧಾನ, ಅಗ್ರೋದಕ ಮೆರವಣಿಗೆ, ಸಂಜೆ ತ್ಯಾಗಮೂರ್ತಿಗೆ 108 ಕಲಶಗಳಿಂದ ಮಹಾಮಸ್ತಕಾಭಿಷೇಕ, ಮಹಾಪೂಜೆ ಮಹಾಮಂಗಳಾರತಿ ನಡೆಯಿತು. ಶನಿವಾರ ರಜಾದಿನವಾದ್ದರಿಂದ ಭಕ್ತಸಂದೋಹ ಭಾರೀ ಸಂಖ್ಯೆಯಲ್ಲಿತ್ತು.