ವೇಣೂರು ಬಾಹುಬಲಿ ರೂಪುಗೊಂಡ ‘ಕಲ್ಹಾಣಿ’ಗೆ ಬೇಕಿದೆ ಕಾಯಕಲ್ಪ೧೨ ವರ್ಷಗಳಿಗೊಮ್ಮೆ ಅತ್ಯಂತ ವಿಜೃಂಭಣೆಯಿಂದ ಬಾಹುಬಲಿಯ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಆ ಹೊತ್ತಿನಲ್ಲಿ ವೇಣೂರಿಗೆ ದೊರಕುವ ಪ್ರಾಶಸ್ತ್ಯ, ಅಭಿವೃದ್ಧಿ, ಧನ ಸಹಾಯದಲ್ಲಿ ಕಿಂಚಿತ್ತಾದರೂ ಗೊಮ್ಮಟನನ್ನು ಕೆತ್ತಿದ ಮೂಲ ಸ್ಥಳಕ್ಕೆ, ಗೊಮ್ಮಟನನ್ನು ಕೆತ್ತಿ ದೈವಗಳಾದ ಕಲ್ಕುಡ, ಕೊಡಮಣಿತ್ತಾಯಗಳ ದೈವಸ್ಥಾನಕ್ಕೆ ಸಿಕ್ಕಿದ್ದಿದ್ದರೂ ಕಲ್ಯಾಣಿ ಕ್ಷೇತ್ರದ ಏಳಿಗೆ, ಬೆಳವಣಿಗೆಗೆ ಮಹತ್ತರ ಕೊಡುಗೆ ದೊರೆತಂತಾಗುತ್ತಿತ್ತು.