ಮಾ.2, 3ರಂದು ರಾಜ್ಯಮಟ್ಟದ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್ -3ಪಂದ್ಯಾಕೂಟದಲ್ಲಿ ಬೆಂಗಳೂರು, ಮೈಸೂರು, ಶಿವಮೊಗ್ಗ, ಅರಸೀಕೆರೆ, ದ.ಕ. ಜಿಲ್ಲೆ, ಉಡುಪಿ ಜಿಲ್ಲೆಯ ಪ್ರತಿಷ್ಠಿತ ತಂಡಗಳು ಭಾಗವಹಿಸಲಿವೆ. ವಿಜೇತ ತಂಡಕ್ಕೆ ಟ್ರೋಫಿಯೊಂದಿಗೆ 1,00,000 ನಗದು, ದ್ವಿತೀಯ ಸ್ಥಾನಿ ತಂಡಕ್ಕೆ ಟ್ರೋಫಿಯೊಂದಿಗೆ 50,005 ನಗದು ಹಾಗೂ ಸೆಮಿಫೈನಲ್ ಪರಾಜಿತ ತಂಡಕ್ಕೆ ಟ್ರೋಫಿಯೊಂದಿಗೆ ಗೌರವಧನ ಮತ್ತು ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವುದು.