ಚಳಿ ಚಳಿ ತಾಳೆನು ಈ ಚಳಿಯಾ... "ಚಳಿ ಚಳಿ ತಾಳೆನು ಈ ಚಳಿಯಾ... ಆಹಾ... " ಎಂಬ ಹಾಡು ಈಗ ಮಧ್ಯ ಕರ್ನಾಟಕವೇನು, ಇಡೀ ಕರ್ನಾಟಕದಲ್ಲೇ ನೆನಪಿಸಿಕೊಳ್ಳುವಂತಾಗಿದೆ. ಇದಕ್ಕೆ ಕಾರಣ, ಈ ಬಾರಿಯ ಚಳಿಗಾಲದ ಮಹಿಮೆ! ಹೌದು. ಮಾಗಿ ಚಳಿಗೆ ದಾವಣಗೆರೆ ನಗರ, ಜಿಲ್ಲೆಯ ಜನರು, ಜಾನುವಾರುಗಳು ತತ್ತರಿಸುತ್ತಿವೆ. ಆರಂಭದಲ್ಲೇ ದಿನದಿನಕ್ಕೂ ಮೂಳೆ ಕೊರೆಯುವಂಥ ಚಳಿ ತೀವ್ರತೆ ಪಡೆಯುತ್ತಿದ್ದು, ಜನರು ಥಂಡಾ ಹೊಡೆಯುವಂತೆ ಮಾಡುತ್ತಿದೆ.