ಇಂದು ಬೆಳಗಾವಿಯಲ್ಲಿ ನಿವೃತ್ತ ನೌಕರರ ಪ್ರತಿಭಟನೆ7ನೇ ವೇತನ ಆಯೋಗದ ಅವಧಿಯಲ್ಲೇ ನಿವೃತ್ತರಾದ ತಮಗೆ ಡಿಸಿಆರ್‌ಜಿ, ಕಮ್ಯುಟೇಷನ್, ಗಳಿಕೆ ರಜೆ, ನಗದೀಕರಣ ಮೊತ್ತವನ್ನು 7ನೇ ವೇತನದ ಆಯೋಗದ ಲೆಕ್ಕಾಚಾರದಲ್ಲೇ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಳಗಾವಿಯಲ್ಲಿ ಸುವರ್ಣಸೌಧದ ಬಳಿ ಡಿ.16ರಂದು ಕರ್ನಾಟಕ ನಿವೃತ್ತ ನೌಕರರ ವೇದಿಕೆ ಕೇಂದ್ರ ಸಮಿತಿ ನೇತೃತ್ವದಲ್ಲಿ ರಾಜ್ಯ ಸರ್ಕಾರದ ನಿವೃತ್ತ ನೌಕರರು ಪ್ರತಿಭಟನೆ ನಡೆಸುವುದಾಗಿ ಸಮಿತಿ ರಾಜ್ಯ ಸಂಚಾಲಕ, ನಿವೃತ್ತ ಪ್ರಾಚಾರ್ಯ ಡಿ.ಆನಂದಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.