ಉಚಿತ ಪ್ರಸಾದ ನಿಲಯಗಳ ಹರಿಕಾರ ಜಯದೇವ ಶ್ರೀಶ್ರೀ ಜಯದೇವ ಜಗದ್ಗುರು ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಆಯಾ ಊರಿನ ಜನರಿಂದ ಪಡೆದ ಕಾಣಿಕೆಯನ್ನು ಅದೇ ಸ್ಥಳದಲ್ಲೇ ಉಚಿತ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ವಿದ್ಯಾ ಪ್ರಸಾರವನ್ನು ಮಾಡಿದರು. ಶ್ರೀಗಳು ಕೇವಲ ತಮ್ಮ ಆತ್ಮೋದ್ಧಾರಕ್ಕಾಗಿ ಶ್ರಮಿಸದೇ, ಜನರ ಮಧ್ಯೆ ಬದುಕಿ ಜನಸಾಮಾನ್ಯರಲ್ಲಿದ್ದ ಅಸ್ಪೃಶ್ಯತೆ, ಅಸಮಾನತೆ, ಬಡತನ, ಹಸಿವು, ಅಜ್ಙಾನ ಮುಂತಾದ ಸಮಾಜದ ರೋಗಗಳನ್ನು ಕಿತ್ತುಹಾಕಿದ ಮಹಾನ್ ದಾರ್ಶನಿಕರು ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ದಾವಣಗೆರೆಯಲ್ಲಿ ನುಡಿದಿದ್ದಾರೆ.