ಚನ್ನಗಿರಿ ಪುರಸಭೆ ಆಡಳಿತ ಅವ್ಯವಸ್ಥೆ ಸುಧಾರಿಸದಿದ್ದರೆ ಪ್ರತಿಭಟನೆಚನ್ನಗಿರಿ ಪಟ್ಟಣದ ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿಯೂ ಒಂದಿಲ್ಲೊಂದು ಸಮಸ್ಯೆಗಳು ಜನರಿಗೆ ಬಾಧಿಸುತ್ತಿವೆ. ಇವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸದಸ್ಯರು ಬುಧವಾರ ಪುರಸಭೆಗೆ ಬಂದಿದ್ದಾರೆ. ಆಗ ಮುಖ್ಯಾಧಿಕಾರಿಗಳಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲೀ ಯಾರು ಇರಲಿಲ್ಲ. ಇದರಿಂದಾಗಿ ಸದಸ್ಯರು ಪುರಸಭೆ ಆಡಳಿತ ಅವ್ಯವಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ, ವಾರ್ಡ್‌ಗಳಲ್ಲಿನ ಸಮಸ್ಯೆಗಳ ಪರಿಹಾರ ಬಗ್ಗೆಯೂ ಚರ್ಚೆ ನಡೆಸಿದರು.