ರಾಜಿ ಸಂಧಾನದಿಂದ ವ್ಯಾಜ್ಯಗಳ ಇತ್ಯರ್ಥ್ಯಕ್ಕೆ ಮುಂದಾಗಿಸಣ್ಣ ಸಣ್ಣ ವಿಷಯಕ್ಕೆ ಹತ್ತಾರು ವರ್ಷಗಳ ಕಾಲ ನ್ಯಾಯಾಲಯಕ್ಕೆ ಅಲೆದಾಡದೇ, ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ಕಕ್ಷಿದಾರರು ಪ್ರಕರಣಗಳ ಇತ್ಯರ್ಥಪಡಿಸಿಕೊಳ್ಳಲು ಮುಂದಾಗಬೇಕು. ದ್ವೇಷ, ಅಸೂಯೇ, ವೈಷಮ್ಯ, ಅಹಂಕಾರಗಳನ್ನು ತ್ಯಜಿಸಿ ಬಾಳಬೇಕು ಎಂದು ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ್ ಹೊನ್ನಾಳಿಯಲ್ಲಿ ಹೇಳಿದ್ದಾರೆ.