ಶಿಕ್ಷಣಕ್ಕೆ ಪ್ರಗತಿಗೆ ಧರ್ಮಸ್ಥಳ ಸಂಸ್ಥೆ ನೆರವು ಶ್ಲಾಘನೀಯಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಮಹಿಳೆಯರ ಆರ್ಥಿಕ ಸ್ವಾವಲಂಬನೆ, ಕುಟುಂಬಗಳ ಆರ್ಥಿಕ ಸಬಲತೆಗೆ ಶ್ರಮಿಸುತ್ತಿದೆ. ಅಷ್ಟೇ ಅಲ್ಲ, ಬಡವರು, ಮಧ್ಯಮ ವರ್ಗದ ಪ್ರತಿಭಾವಂತ ಮಕ್ಕಳಿಗೆ ವೃತ್ತಿ ಮತ್ತು ತಾಂತ್ರಿಕ ಶಿಕ್ಷಣಕ್ಕೆ ಅನುವಾಗುವಂತೆ 3ರಿಂದ 4 ವರ್ಷ ಅವಧಿಗೆ ಪ್ರತಿ ತಿಂಗಳು ಕೋರ್ಸ್‌ಗಳನ್ನು ಆಧರಿಸಿ ₹400ರಿಂದ ₹1 ಸಾವಿರ ನೀಡುತ್ತಿದೆ. ಆ ಮೂಲಕ ಮಕ್ಕಳ ಭವಿಷ್ಯ ಕಟ್ಟಿಕೊಡುವ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ, ಕನ್ನಡಪ್ರಭ ಹಿರಿಯ ಪ್ರಧಾನ ವರದಿಗಾರ ನಾಗರಾಜ ಎಸ್. ಬಡದಾಳ್ ಹೇಳಿದರು.