ಪ್ರೊ. ಎಸ್.ಬಿ. ರಂಗನಾಥ ಹೆಸರು ಚಿರಸ್ಥಾಯಿಗೊಳಿಸಿ: ಸಿರಿಗೆರೆ ಶ್ರೀಯಾವುದೇ ಹುದ್ದೆ ಇಲ್ಲದೇ, ಅಧಿಕಾರವನ್ನು ಮುಖ್ಯವಾಗಿಸಿಕೊಳ್ಳದೇ, ಕನ್ನಡ ಸೇವೆಯನ್ನೇ ಮುಖ್ಯವಾಗಿಸಿಕೊಂಡು, ದಾವಣಗೆರೆಯಲ್ಲಿ ಕುವೆಂಪು ಕನ್ನಡ ಭವನ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೊ. ಎಸ್.ಬಿ. ರಂಗನಾಥರ ಹೆಸರನ್ನು ಚಿರಸ್ಥಾಯಿಯಾಗಿಸುವ ಕೆಲಸ ಈ ಭವನದಲ್ಲಿ ಆಗಬೇಕು ಎಂದು ಸಿರಿಗೆರೆಯ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ದಾವಣಗೆರೆಯಲ್ಲಿ ನುಡಿದರು.