ಡಾ.ಪ್ರಭಾ ಕನ್ನಡದಲ್ಲಿ ಪ್ರಮಾಣ ವಚನ: ದಾವಣಗೆರೆಯಲ್ಲಿ ಸಂಭ್ರಮದಾವಣಗೆರೆ ಲೋಕಸಭಾ ಕ್ಷೇತ್ರದ ಪ್ರಥಮ ಮಹಿಳಾ ಸಂಸದೆಯಾಗಿ ಇತಿಹಾಸ ರಚಿಸಿದ ಡಾ.ಪ್ರಭಾ ಮಲ್ಲಿಕಾರ್ಜುನ ದೇಶದ ಶಕ್ತಿ ಕೇಂದ್ರದ ಮೆಟ್ಟಿಲುಗಳಿಗೆ ತಲೆ ಹಚ್ಚಿ ನಮಸ್ಕರಿಸಿ, ತಮ್ಮನ್ನು ಆಯ್ಕೆ ಮಾಡಿ ಕಳಿಸಿದ ಕ್ಷೇತ್ರದ ಮತದಾರರಿಗೆ ಮನದಲ್ಲೇ ಕೃತಜ್ಞತೆ ಸಲ್ಲಿಸಿದರು. ಜೊತೆಗೆ ಸಂಸದರಾಗಿ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸಂಸತ್ತಿನಲ್ಲಿ ಮಾದರಿ ಹೆಜ್ಜೆ ಗುರುತು ದಾಖಲಿಸಿದರು.