ಕುಂಬಳೂರಲ್ಲಿ ನಿಲ್ಲದ ಕೆಂಪು ಬಸ್ಸುಗಳಿಗೆ ಬ್ರೇಕ್ ಹಾಕೋರ್ಯಾರು?!ನೂತನ ಸಂಸದರು, ಶಾಸಕರು ಯಾರೇ ಆರಿಸಿಬಂದರೂ, ಜಿಲ್ಲೆಯ ಬಹುತೇಕ ಕಡೆ ಇಂದಿಗೂ ಸರಿಯಾಗಿ ಸರ್ಕಾರಿ ಬಸ್ ಸೇವೆಗಳಿಲ್ಲ. ಇದ್ದರೂ, ಸರ್ಕಾರಿ ಆದೇಶ ಜನರ ಸಮಸ್ಯೆಗಳಿಗೆ ಅನುಗುಣವಾಗಿ ಪಾಲನೆಯೂ ಆಗುತ್ತಿಲ್ಲ. ಇದಕ್ಕೆ ಸ್ಪಷ್ಟ ನಿದರ್ಶನ ಮಲೇಬೆನ್ನೂರು ಜನತೆ ಹಾಗೂ ಗ್ರಾಮೀಣ ಪ್ರದೇಶಗಳಿಂದ ಮಲೇಬೆನ್ನೂರಿಗೆ ಬಂದುಹೋಗುವವರು ಅನುಭವಿಸುತ್ತಿರುವ ಬವಣೆ.