ಕಾಲ್ ಡೀಟೇಲ್ಸ್, ಲೊಕೇಷನ್ ಸಮೇತ ಚರ್ಚೆಗೆ ಬನ್ನಿದಾವಣಗೆರೆ ಲೋಕಸಭೆ ಚುನಾವಣೆ ಘೋಷಣೆ ಪೂರ್ವದಿಂದ ಫಲಿತಾಂಶದ ನಂತರದ ದಿನಗಳವರೆಗಿನ ಲಗಾನ್ ತಂಡದ ಎಲ್ಲ ಸದಸ್ಯರ ಕಾಲ್ ಲೀಸ್ಟ್, ಲೊಕೇಷನ್ ತೆಗೆಸೋಣ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಸೇರಿದಂತೆ ನಾವೂ ತೆಗೆಸುತ್ತೇವೆ. ಪಕ್ಷದ ಕಚೇರಿಯಲ್ಲಿ ಕುಳಿತು, ಯಾರ ತಪ್ಪು, ಯಾರದು ಸರಿ ಎಂಬ ಚರ್ಚೆ ಮಾಡಲು ನಾವು ಸಿದ್ಧ, ನೀವು ಸಿದ್ಧರಿದ್ದೀರಾ ಎಂದು ಪಕ್ಷದ ನಿಕಟಪೂರ್ವ ಜಿಲ್ಲಾಧ್ಯಕ್ಷ ಬಿ.ಎಸ್. ಜಗದೀಶ ದಾವಣಗೆರೆಯಲ್ಲಿ ಸವಾಲು ಹಾಕಿದ್ದಾರೆ.