ಪ್ರತಿನಿತ್ಯ ಯೋಗಾಸನ ಮುಖ್ಯ: ಡಾ.ರಾಘವೇಂದ್ರ ದುರ್ಗೋಜಿದೈನಂದಿನ ಬದುಕಿನಲ್ಲಿ ನಿತ್ಯವೂ ಒತ್ತಡದ ವಾತಾವರಣವಿದ್ದು, ಸದೃಢ ಆರೋಗ್ಯ ಹೊಂದುವುದು ಮರೆತು ಬಿಟ್ಟಿದ್ದೇವೆ. ಈ ಒತ್ತಡದ ಜೀವನ ಶೈಲಿಯಿಂದ ಹೊರಬರಲು ದಿನನಿತ್ಯ ಯೋಗಾಭ್ಯಾಸ ಮಾಡುವುದು ಮುಖ್ಯವಾಗಿದೆ. ಅನಾರೋಗ್ಯ ಸಮಸ್ಯೆಗಳಿಗೆ ಯೋಗ, ಧ್ಯಾನ, ಪ್ರಾಣಾಯಾಮ ಸರಿಯಾದ ಮಾರ್ಗ ಎಂದು ಹರಿಹರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ತುರ್ತು ಅಪಘಾತ ಚಿಕಿತ್ಸಾ ವಿಭಾಗದ ಪ್ರಸಿದ್ಧ ವೈದ್ಯಾಧಿಕಾರಿ ಡಾ.ರಾಘವೇಂದ್ರ ದುರ್ಗೋಜಿ ಅಭಿಪ್ರಾಯಪಟ್ಟಿದ್ದಾರೆ.