ಕೇಂದ್ರ ಸರ್ಕಾರದಿಂದ ಅಘೋಷಿತ ತುರ್ತು ಪರಿಸ್ಥಿತಿ ಹೇರಿಕೆಕಾಂಗ್ರೆಸ್ ಹಾಗೂ ಇತರೆ ವಿಪಕ್ಷಗಳ ಮುಖಂಡರನ್ನು ಐ.ಟಿ., ಇ.ಡಿ. ದಾಳಿಯಿಂದ ಹೆದರಿಸುವುದು, ಸೂಕ್ತ ಸಾಕ್ಷ್ಯಾಧಾರ ಇಲ್ಲದಿದ್ದರೂ ಮುಖ್ಯಮಂತ್ರಿ, ಮಂತ್ರಿ, ಸಂಸದರನ್ನು ಜೈಲಿಗೆ ಕಳಿಸುವ ನೀಚ ಕೃತ್ಯ ಎಸಗುತ್ತ ಕೇಂದ್ರದ ಬಿಜೆಪಿ ಸರ್ಕಾರ ಅಘೋಷಿತವಾಗಿ ದೇಶದಲ್ಲಿ ತುರ್ತು ಸ್ಥಿತಿ ಹೇರಿದೆ ಎಂದು ಕಾಂಗ್ರೆಸ್ನ ಮಾಜಿ ಸಚಿವ ಎಚ್.ಆಂಜನೇಯ ಹರಿಹರದಲ್ಲಿ ಆರೋಪಿಸಿದ್ದಾರೆ.