ಅಂಧ ಮಕ್ಕಳ ಸಂಗೀತ ಸಾಧನೆಗೆ ಪ್ರೋತ್ಸಾಹಿಸಿ: ನಾಗರಾಜಅನ್ನದಾನದ ಜೊತೆಗೆ ಅಂಧ ಮಕ್ಕಳಿಗೆ ಸಂಗೀತಾಭ್ಯಾಸಕ್ಕೆ ಅನುಕೂಲವಾಗುವಂತೆ ವೀಣೆ, ಕೊಳಲು ಸೇರಿದಂತೆ ಸಂಗೀತ ಪರಿಕರ ನೀಡಬೇಕು. ಆ ಮೂಲಕ ಅವರು ಸಂಗೀತದಲ್ಲಿ ಸಾಧನೆ ಮಾಡಿ, ತಮ್ಮ ಅನ್ನವನ್ನು ತಾವೇ ಗಳಿಸುವಂತೆ ಪ್ರೋತ್ಸಾಹಿಸಬೇಕು ಎಂದು ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ನೂತನ ಅಧ್ಯಕ್ಷ, ಕನ್ನಡಪ್ರಭ ಹಿರಿಯ ಪ್ರಧಾನ ವರದಿಗಾರ ನಾಗರಾಜ ಎಸ್. ಬಡದಾಳ್ ಹೇಳಿದ್ದಾರೆ.