ಗಾಯತ್ರಿ ಸಿದ್ದೇಶ್ವರ್‌ಗೆ ಒನಕೆ ಗಿಫ್ಟ್!ಚುನಾವಣೆ ಸಂದರ್ಭದಲ್ಲಿ ನಾಯಕರು, ಅಭ್ಯರ್ಥಿಗಗಳಿಗೆ ಕಂಬಳಿ ಹಾಕಿ, ಬೆಳ್ಳಿ ಕಿರೀಟ, ಮೈಸೂರು ಪೇಟ ತೊಡಿಸಿ, ಶಾಲು ಹಾಕಿ, ಕ್ರೇನ್ ಸಹಾಯದಿಂದ ಸೇಬು ಹಣ್ಣಿನ ಹಾರ, ಹೂವಿನ ಹಾಕುವುದು, ಪುಟ್ಟ ನೇಗಿಲು ಕೊಡುವುದು, ಬೆಳ್ಳಿ ಇತರೆ ಲೋಹದ ಖಡ್ಗ ಸಾಮಾನ್ಯ. ಆದರೆ, ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್‌ಗೆ ಮಹಿಳೆಯೊಬ್ಬರು ಹೊಸ ಒನಕೆ ನೀಡುವ ಮೂಲಕ ಎಲ್ಲರ ಗಮನ ಸೆಳೆಸಿದ್ದಾರೆ.