ಜಿಲ್ಲಾ ವರದಿಗಾರರ ಕೂಟ ಅಧ್ಯಕ್ಷರಾಗಿ ನಾಗರಾಜ್ ಬಡದಾಳ್ಜಿಲ್ಲಾ ವರದಿಗಾರರ ಕೂಟಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕನ್ನಡಪ್ರಭ ಪತ್ರಿಕೆ ಹಿರಿಯ ವರದಿಗಾರ ನಾಗರಾಜ ಎಸ್. ಬಡದಾಳ್ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ನಾಗರಾಜ ಬಡದಾಳ್ 74, ಸುವರ್ಣ ಟಿವಿ ಹಿರಿಯ ವರದಿಗಾರ ಡಾ. ಸಿ.ವರದರಾಜ, 45 ಹಾಗೂ ದಾವಣಗೆರೆ ಕನ್ನಡಿಗ ಪತ್ರಿಕೆ ಸಂಪಾದಕ ಆರ್.ರವಿ 36 ಮತಗಳನ್ನು ಪಡೆದರು.