ದೇಶ ಮುನ್ನಡೆಸಲು ಕಾಂಗ್ರೆಸ್ಸಲ್ಲಿ ಯಾರಿದ್ದಾರೆ?ಒಂದು ಕಡೆ ಬಿಜೆಪಿ ದೇಶ ಮುನ್ನಡೆಸುತ್ತಿದ್ದರೆ, ಮತ್ತೊಂದು ಕಡೆ ಕಾಂಗ್ರೆಸ್ ದೇಶ ಹಿಂದಕ್ಕೆ ಎಳೆಯುವ ಕೆಲಸ ಮಾಡುತ್ತಿದೆ. ವಿಕಸಿತ ಭಾರತಕ್ಕಾಗಿ ದಣಿವರಿಯದೆ 24X7ನಂತೆ 2047ರ ಗುರಿ ಇಟ್ಟುಕೊಂಡು ನಾವು ಕೆಲಸ ಮಾಡುತ್ತಿದ್ದರೆ, ಕಾಂಗ್ರೆಸ್ ದೇಶ ಒಡೆದು ಹಾಕುವ, ಅಭಿವೃದ್ಧಿಗೆ ತಡೆಯೊಡ್ಡುವ ಕೆಲಸ ಮಾಡಲು ಹೊರಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.