ಮಹಿಳಾ ಸಬಲೀಕರಣವೇ ಕಾಂಗ್ರೆಸ್ ಮುಖ್ಯ ಗುರಿಮಹಿಳೆಯರಿಗೆ ಎಲ್ಲ ಕ್ಷೇತ್ರದಲ್ಲೂ ಪ್ರೋತ್ಸಾಹ ನೀಡುತ್ತಾ ಬಂದ ಕಾಂಗ್ರೆಸ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇ.50 ಮಹಿಳೆಯರಿಗೆ ಅವಕಾಶ ನೀಡಿದೆ. ಈಗ ದಾವಣಗೆರೆ ಲೋಕಸಭಾ ಕ್ಷೇತ್ರ ಸ್ಪರ್ಧೆಗೆ ತಮಗೆ ಅವಕಾಶ ನೀಡಿದ್ದು, ಕ್ಷೇತ್ರದ ಮತದಾರರು ಮತ ನೀಡುವ ಮೂಲಕ ಗೆಲ್ಲಿಸಿ, ಪ್ರಥಮ ಸಂಸದೆಯಾಗಿಸಬೇಕು ಎಂದು ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ದಾವಣಗೆರೆಯಲ್ಲಿ ಮನವಿ ಮಾಡಿದರು.