ಅಣ್ಣಿಗೇರಿ ಹೊಲಗಳ ರೇಟು ಏರಿಸಿದ ಚಕ್ಕಡಿ ರಸ್ತೆ!ಅಣ್ಣಿಗೇರಿ ಪಟ್ಟಣದ ಹೊಲಗಳಿಗೆ ತೆರಳಲು ವಿವಿಧೆಡೆ ಚಕ್ಕಡಿ ರಸ್ತೆಗಳನ್ನು ನಿರ್ಮಿಸಲಾಗಿದ್ದು, ಈ ರಸ್ತೆ ನಿರ್ಮಾಣದ ಬಳಿಕ ಹೊಲಗಳಿಗೆ ಭಾರೀ ಬೇಡಿಕೆ ಬಂದಿದೆ. ಎಕರೆಗೆ ₹6-7 ಲಕ್ಷಕ್ಕೆ ಮಾರಾಟವಾಗುತ್ತಿದ್ದ ಹೊಲಗಳು ಈಗ ₹ 10ರಿಂದ 15 ಲಕ್ಷದ ವರೆಗೆ ಮಾರಾಟವಾಗುತ್ತಿವೆ.