ಕನ್ನಡ ಸಾಹಿತ್ಯ ಲೋಕಕ್ಕೆ ವೀರಪ್ಪ ವಿಶೇಷ ಕೊಡುಗೆವೀರಪ್ಪ ನಾಗಶೆಟ್ಟಿ ಅವರು ಮುಲ್ಕಿ ಪರೀಕ್ಷೆ ಪಾಸಾಗಿ ಒಬ್ಬ ಶ್ರೇಷ್ಠ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುವ ಮೂಲಕ ಅಂದಿನ ಶಿಕ್ಷಣ ಕ್ಷೇತ್ರಕ್ಕೆ ಆದರ್ಶವಾಗಿ ಶಿಕ್ಷಕರಿಗೆ ಮಾರ್ಗದರ್ಶಕರಾದರು. ಅವರ ಜ್ಞಾನ ಅಪರಿಮಿತವಾಗಿತ್ತು. ಕನ್ನಡ, ಸಂಸ್ಕೃತ, ಮರಾಠಿ ಮತ್ತು ಇಂಗ್ಲಿಷ್ ಈ ನಾಲ್ಕು ಭಾಷೆಗಳಲ್ಲಿ ಪ್ರಾವಿಣ್ಯತೆ ಹೊಂದಿದ್ದರು.