ಅಡಿಬೈಲು ರಂಗನಾಥಸ್ವಾಮಿ ಬಿಂದಿಗಮ್ಮ ಜಾತ್ರೆ ಸಂಪನ್ನಅಡಿಬೈಲು ಬಿಂದಿಗಮ್ಮರವರ ಜಾತ್ರೆ ಭರತೂರು ಬಳಿ ಹೇಮಾವತಿ ಹೊಳೆ ಬದಿಯಲ್ಲಿ ಅತ್ಯಂತ ವೈಭವದಿಂದ ನೆರವೇರಿತು. ಪ್ರತಿ ವರ್ಷ ಹೊಳೆ ಬದಿ ದೇವಸ್ಥಾನದ ಬಳಿಗೆ ಹೋದ ವಾಹನಗಳು, ಅದೇ ದಾರಿಯಲ್ಲಿ ವಾಪಾಸು ಬರಬೇಕಾದ್ದರಿಂದ, ವಾಹನಗಳ ಸಂಚಾರಕ್ಕೆ ಭಾರಿ ಅವ್ಯವಸ್ಥೆಯಾಗುತ್ತಿತ್ತು. ಈ ವರ್ಷ ವಾಹನಗಳು ಹೊಳೆ ದಾಟಿಕೊಂಡು ಕಲ್ಲರೆ ಗ್ರಾಮದ ಮೇಲೆ ವಾಪಾಸು ತೆರಳಲು ಅವಕಾಶ ಮಾಡಿದ್ದರಿಂದ, ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಯಿತು.