ಕನ್ನಡದ ತೇರಾದ ಕೆಎಸ್‌ಆರ್‌ಟಿಸಿ ಬಸ್ಬೇಲೂರು ಸಾರಿಗೆ ಘಟಕದ ವತಿಯಿಂದ ಬೇಲೂರು ಬಾಣಾವಾರ ನಡುವೆ ಚಲಿಸುವ ಬಸ್ಸನ್ನು ಸಂಪೂರ್ಣವಾಗಿ ಕನ್ನಡ ಧ್ವಜ, ಬಾವುಟ, ಸಾಹಿತಿಗಳು, ನಟರು, ಪ್ರೇಕ್ಷಣೀಯ ಸ್ಥಳಗಳ ಚಿತ್ರಗಳಿಂದ ಅಲಂಕರಿಸಲಾಗಿದೆ. ಒಂದೊಂದನ್ನೇ ಓದುತ್ತಾ ಹೋದರೆ ಕರ್ನಾಟಕದ ಇತಿಹಾಸ ನೆನಪಿಗೆ ಬರುತ್ತದೆ. ಕನ್ನಡ ರಥದಲ್ಲಿ ರಾಜ್ಯೋತ್ಸವ ಪುರಸ್ಕೃತ ಸಾಹಿತಿಗಳು, ಕನ್ನಡದ ಮೇರು ನಟರು, ರಾಜರು, ಹಾಸನ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಮಾಹಿತಿಯಿದೆ.ಇಡೀ ಬಸ್‌ನ ಒಂದೊಂದು ಸೀಟಿನಲ್ಲೂ ಕನ್ನಡದದ ಬಾವುಟ. ಕನ್ನಡದ ವಾತಾವರಣ ಸೃಷ್ಟಿಸುವ ಬಲೂನುಗಳ ಅಲಂಕಾರ ಗಮನ ಸೆಳೆಯುತ್ತದೆ.