ಚೌಲಗೆರೆ ಟೋಲ್ ವಿವಾದಕ್ಕೆ ಸಂಸದರಿಂದ ತೆರೆಆಲೂರು ಸಮೀಪದ ಚೌಲಗೆರೆ ಟೋಲ್ ಬಳಿ ಸುಂಕ ವಸೂಲಿ ಕುರಿತಾಗಿ ಏರ್ಪಟ್ಟಿದ್ದ ಗೊಂದಲಕ್ಕೆ ಸಂಸದ ಶ್ರೇಯಸ್ ಪಟೇಲ್ ತೆರೆ ಹೇಳಿದರು. ಸೋಮವಾರ ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಳೀಯರು, ಕನ್ನಡಪರ ಸಂಘಟನೆಗಳು, ಟೋಲ್ ಸಿಬ್ಬಂದಿ ಹಾಗೂ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿದ ಸಂಸದರು, ಸಮಸ್ಯೆಯನ್ನು ಸೌಹಾರ್ದತಹಿತವಾಗಿ ಇತ್ಯರ್ಥಪಡಿಸಿದರು.