ಹೆದ್ದಾರಿಯ ಎರಡೂ ಬದಿ ಕಸದ ರಾಶಿಬೆಂಗಳೂರು ಮಾರ್ಗವಾಗಿ ಅರಸೀಕೆರೆಗೆ ಬರುವ ಪ್ರಯಾಣಿಕರಿಗೆ ಹೆದ್ದಾರಿಯ ಎರಡೂ ಬದಿ ಕಣ್ಣಿಗೆ ರಾಚುವಂತೆ ತ್ಯಾಜ್ಯ ಸುರಿದಿದ್ದಾರೆ. ನಗರ ವ್ಯಾಪ್ತಿಗೆ ಕೂದಲೆಳೆ ಅಂತರದಲ್ಲಿ ಸಾಲು ಸಾಲಾಗಿ ಕಸದ ರಾಶಿಯನ್ನ ಕಾಣಬಹುದು. ಈ ಪ್ರದೇಶ ನಗರ ವ್ಯಾಪ್ತಿಗೆ ಸೇರುವುದಿಲ್ಲ. ಹಾಗಾಗಿ ನಗರಸಭೆ ಆರೋಗ್ಯ ನಿರೀಕ್ಷಕರು ಇತ್ತ ತಿರುಗಿ ನೋಡುತ್ತಿಲ್ಲ. ಮತ್ತೊಂದೆಡೆ ಹೆದ್ದಾರಿ ಇಲಾಖೆ ಅಧಿಕಾರಿಗಳು ರಸ್ತೆ ಅಭಿವೃದ್ಧಿ, ದುರಸ್ತಿ ಇಷ್ಟೆ ನಮ್ಮ ಕೆಲಸ, ಉಳಿದಿದ್ದು ನಮ್ಮದಲ್ಲ ಎನ್ನುವ ಮನಸ್ಥಿತಿ ಹೊಂದಿದ್ದು, ಈ ಕಾರಣಗಳಿಂದಾಗಿ ಹೆದ್ದಾರಿ ಬದಿಯ ಪಾದಚಾರಿ ರಸ್ತೆಗಳು ಸವಾಲಾಗಿದೆ.