ಕೆಲಸದ ಸ್ಥಳದಲ್ಲಿ ಸ್ಮೃತಿ ಉಳಿದಾಗ ಸೇವೆಗೆ ಅರ್ಥ: ತಹಸೀಲ್ದಾರ್ ಎಂ.ಮಮತಾಸರ್ಕಾರಿ ನೌಕರರಿಗೆ ವರ್ಗಾವಣೆ ಅನಿವಾರ್ಯ. ಆದರೆ, ತಾವು ಕೆಲಸ ನಿರ್ವಹಿಸಿದ ಸ್ಥಳದಲ್ಲಿ ಹಾಗೂ ಸ್ಥಳೀಯರಲ್ಲಿ ಶಾಶ್ವತವಾಗಿ ತಮ್ಮ ನೆನಪು ಉಳಿಯುವಂತಾದಾಗ ಮಾತ್ರ ಸೇವೆಗೆ ನಿಜವಾದ ಅರ್ಥ ಬರುತ್ತದೆ ಎಂದು ತಹಸೀಲ್ದಾರ್ ಎಂ.ಮಮತಾ ಹೇಳಿದರು. ಬೇಲೂನ್ನಲ್ಲಿ ಆಯೋಜಿಸಿದ ಸನ್ಮಾನ ಮತ್ತು ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.