ಹಂಪನಾ ಅಗಲಿಕೆ ಸಾಹಿತ್ಯಿಕ ಲೋಕಕ್ಕೆ ತುಂಬಲಾರದ ನಷ್ಟ: ಕಸಾಪ ಅಧ್ಯಕ್ಷ ಕೊಟ್ರೇಶ್ಆಧುನಿಕ ಸಾಹಿತ್ಯದಲ್ಲಿ ತಮ್ಮದೇಯಾದ ಛಾಪು ಮೂಡಿಸಿದವರು. ತಮ್ಮ ಐವತ್ತಕ್ಕೂ ಹೆಚ್ಚು ಸೃಜನಶೀಲ, ಸೃಜನೇತರ ಕೃತಿಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ಮೌಲ್ಯಗಳನ್ನು ಕಟ್ಟಿಕೊಟ್ಟವರು. ಕಥೆ, ಕಾವ್ಯ, ಪಠ್ಯ ವಿಮರ್ಶೆ, ಸಾಹಿತ್ಯ ವಿಮರ್ಶೆ, ಕಾದಂಬರಿ, ಜೀವನ ಚರಿತ್ರೆ ಮುಂತಾದ ಪ್ರಕಾರಗಳಲ್ಲಿ ಹಲವು ದಶಕಗಳ ಕಾಲ ನಿರಂತರವಾಗಿ ದುಡಿದಿದ್ದಾರೆ.