• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಬಾಗೂರು ಗ್ರಾಮ ಪಂಚಾಯತ್‌ ಅಧ್ಯಕ್ಷರಾಗಿ ಕೆಂಪೇಗೌಡ ಅವಿರೋಧ ಆಯ್ಕೆ
ಬಾಗೂರು ಹೋಬಳಿ ಕೇಂದ್ರದ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಪಿ. ದಾಸಪುರ ಗ್ರಾಮದ ಡಿ. ಎನ್. ಕೆಂಪೇಗೌಡ ಅವಿರೋಧವಾಗಿ ಆಯ್ಕೆಗೊಂಡರು. ಈ ಹಿಂದೆ ಅಧ್ಯಕ್ಷರಾಗಿದ್ದ ಬಿ.ಪಿ. ಲಕ್ಷ್ಮಣ್ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಡಿಎನ್ ಕೆಂಪೇಗೌಡ ಹೊರತುಪಡಿಸಿ ಯಾರೂ ನಾಮಪತ್ರ ಸಲ್ಲಿಸದೆ ಇರುವುದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಹರೀಶ್ ಘೋಷಿಸಿದರು.
ವಾಣಿವಿಲಾಸ ತಲುಪದ ನಿರೀಕ್ಷಿತ ಮಟ್ಟದ ಎತ್ತಿನಹೊಳೆ ನೀರು
ಯೋಜನೆ ಉದ್ಘಾಟನೆಗೊಂಡ ಎರಡು ತಿಂಗಳಿನಲ್ಲಿ ಐದು ಟಿಎಂಸಿ ಎತ್ತಿನಹೊಳೆ ನೀರು ವಾಣಿವಿಲಾಸ ಸಾಗರಕ್ಕೆ ಹರಿಯಲಿದೆ ಎಂದು ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ಹಿರಿಯ ಅಧಿಕಾರಿಗಳು ಸೆ. ತಿಂಗಳ ೭ರಂದು ಕಾಮಗಾರಿ ಉದ್ಘಾಟನೆಯ ವೇಳೆ ಬಹಿರಂಗ ಸಭೆಯಲ್ಲಿ ಹೇಳಿದ್ದರು. ಆದರೆ, ಯೋಜನೆ ಉದ್ಘಾಟನೆಗೊಂಡು ೫೦ ದಿನಗಳು ಕಳೆಯುತ್ತಾ ಬಂದರೂ ಎತ್ತಿನಹೊಳೆ ನೀರು ವಾಣಿವಿಲಾಸ ಸಾಗರ ತಲುಪಲು ಸಾಧ್ಯವಾಗದಾಗಿದೆ.
ಅಗ್ರಹಾರ ಬೆಳಗುಲಿ ಕೆರೆ ತುಂಬಿಸುವ ಯೋಜನೆಗೆ ಭೈರಪ್ಪ ಹೆಸರು
ಚನ್ನರಾಯಪಟ್ಟಣ ತಾಲೂಕಿನ ಸಂತೇಶಿವರ ಅಗ್ರಹಾರ ಬೆಳಗುಲಿ ಕೆರೆ ತುಂಬಿಸುವ ಯೋಜನೆ ಸಾಕಾರಗೊಳ್ಳಲು ಸಾಹಿತಿ ಡಾ.ಎಸ್ ಎಲ್ ಭೈರಪ್ಪ ನವರ ಪರಿಶ್ರಮವಿದ್ದು, ಈ ಯೋಜನೆಗೆ ಸಾಹಿತಿ ಡಾ ಎಸ್.ಎಲ್. ಭೈರಪ್ಪ ಯೋಜನೆಯೆಂದು ಹೆಸರಡಲಾಗುತ್ತದೆ ಎಂದು ಶಾಸಕ ಸಿ. ಎನ್ ಬಾಲಕೃಷ್ಣ ತಿಳಿಸಿದರು. ತಾಲೂಕಿನ ಬಾಗೂರು ಹೋಬಳಿಯ ಕಾರೇಹಳ್ಳಿ ಸಮೀಪ ನಡೆಯುತ್ತಿರುವ ಯೋಜನೆಯ ಪೈಪ್‌ಲೈನ್ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದರು.
ಸಂಪ್ರದಾಯದಂತೆ ತೆರೆದ ಹಾಸನಾಂಬ ದೇಗುಲದ ಬಾಗಿಲು
ಜಿಲ್ಲೆಯ ಹೆಮ್ಮೆ ಹಾಗೂ ನಗರದ ಅಧಿದೇವತೆ ಶ್ರೀ ಹಾಸನಾಂಬ ದೇವಸ್ಥಾನದ ಬಾಗಿಲನ್ನು ಈ ವರ್ಷದ ಪಂಚಾಂಗದ ಪ್ರಕಾರ ಗುರುವಾರ ಮಧ್ಯಾಹ್ನ 12.15ಕ್ಕೆ ಗರ್ಭಗುಡಿ ಮುಂದೆ ಬಾಳೆ ಕಂಬ ಕಡಿಯುವ ಮೂಲಕ ತೆರೆಯಲಾಯಿತು. ಇದರೊಂದಿಗೆ ಅ.24ರಿಂದ ಆರಂಭವಾಗಿರುವ ಹಾಸನಾಂಬ ಹಾಗೂ ಶ್ರೀ ಸಿದ್ಧೇಶ್ವರಸ್ವಾಮಿ ಜಾತ್ರೋತ್ಸವ ನವೆಂಬರ್‌ 3ರವರೆಗೆ ನಡೆಯಲಿದೆ. ಮೊದಲ ದಿನವಾದ ಗುರುವಾರ ಸಾರ್ವಜನಿಕರಿಗೆ ದೇವಾಲಯದ ಒಳ ಪ್ರವೇಶ ಇರಲಿಲ್ಲ. ಆದರೂ ಭಕ್ತರು ಮೊದಲ ದಿನದಲ್ಲಿ ದೇವಿ ದರ್ಶನ ಮಾಡಲು ಮುಗಿಬಿದ್ದಿದ್ದರು. ಹಾಸನಾಂಬೆ ಬಾಗಿಲು ತೆಗೆಯುವ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ಒಳ ಬಂದರು.
ಬಿಜೆಪಿ ಜೆಡಿಎಸ್ ರಾಜ್ಯ ಸರ್ಕಾರವನ್ನು ಬೀಳಿಸಲು ಯತ್ನಿಸುತ್ತಿವೆ
ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸಲು ಬಿಜೆಪಿ ಹಾಗೂ ಜೆಡಿಎಸ್‌ ಸಂವಿಧಾನ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ ಎಂದು ಆರೋಪಿಸಿ ಮಂಗಳವಾರ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಅಧಿಕಾರಕ್ಕೆ ಬರುವ ಸರ್ಕಾರಗಳು, ಸಾಮಾಜಿಕ ನ್ಯಾಯ, ಅಸ್ಪೃಶ್ಯತೆ, ಜಾತಿ ತಾರತಮ್ಯ, ಅಸಮಾನತೆಗಳನ್ನು ಹೋಗಲಾಡಿಸಲು ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳದೆ ಇರುವುದರಿಂದ ಇಂದು ಮೂಲಭೂತ ಹಕ್ಕುಗಳಿಂದ ವಂಚಿತರಾಗಿ ಕನಿಷ್ಠ ಅವಕಾಶಗಳಿಲ್ಲದೆ ಜೀವನ ಸಾಗಿಸುತ್ತಿದ್ದಾರೆ ಎಂದರು.
ನಾಳೆ ಬಾಗಿಲು ತೆರೆಯಲಿರುವ ಹಾಸನಾಂಬೆ ದೇಗುಲ
ಅಕ್ಟೋಬರ್ ೨೪ರ ಗುರುವಾರದಂದು ಮಧ್ಯಾಹ್ನ ೧೨ ಗಂಟೆಗೆ ರಾಜ ಮನೆತನದ ನರಸಿಂಹ ರಾಜ ಅರಸು ಅವರು ಬಾಳೆಕಂದು ಕತ್ತರಿಸಿದ ನಂತರ ದೇವಿಯ ಗರ್ಭಗುಡಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಬಾಗಿಲನ್ನು ತೆಗೆದು ದರ್ಶನ ಆರಂಭವಾಗಿ ನವೆಂಬರ್ ೩ನೇ ತಾರೀಖು ಮುಚ್ಚಲಾಗುತ್ತದೆ. ಬ್ಯಾರಿಕೇಡ್, ನೆಲಹಾಸು, ಜರ್ಮನ್ ಟೆಂಟ್, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯವನ್ನು ಕಲ್ಪಿಸಲಾಗಿದೆ. ಒಂದು ಸಾವಿರ ಮತ್ತು ೩೦೦ ರು.ಗಳ ಟಿಕೆಟ್ ಪಡೆಯಲು ಪ್ರತ್ಯೇಕ ಕೌಂಟರ್ ವ್ಯವಸ್ಥೆ, ಲಾಡು ಪಡೆಯಲು ಪತ್ಯೇಕ ಕೇಂದ್ರ ಸ್ಥಾಪಿಸಲಾಗಿದೆ.
ನಗರಸಭೆ ಅಧಿಕಾರಿಗಳಿಂದ ಚಪ್ಪಲಿ ಅಂಗಡಿ ತೆರವು
ಡಿಸಿ ಮತ್ತು ನಗರಸಭೆ ಆಯುಕ್ತರ ಆದೇಶದಂತೆ ನಗರಸಭೆ ಅಧಿಕಾರಿಗಳು ರಸ್ತೆ ಬದಿ ಪಾದಚಾರಿ ಮಾರ್ಗದ ಒತ್ತುವರಿ ತೆರವು ಕಾರ್ಯಾಚರಣೆಯ ಮುಂದುವರೆದ ಭಾಗದಲ್ಲಿ ಮಂಗಳವಾರ ಕೂಡ ನಗರದ ಸಂತೇಪೇಟೆ ವೃತ್ತದಲ್ಲಿ ಇಡಲಾಗಿದ್ದ ಚಪ್ಪಲಿ ರಿಪೇರಿ ಪೆಟ್ಟಿಗೆ ಅಂಗಡಿ ತೆರವು ವೇಳೆ ಭಾರೀ ವಿರೋಧ ವ್ಯಕ್ತವಾಗಿ ವಾಗ್ವಾದ ಉಂಟಾಯಿತು. ತೆರವುಗೊಂಡ ಚಪ್ಪಲಿ ಅಂಗಡಿ ಮಾಲೀಕರಾದ ಕಮಲಮ್ಮ ಮಾಧ್ಯಮದೊಂದಿಗೆ ಮಾತನಾಡಿ, ಸಂತೇಪೇಟೆ ವೃತ್ತದಲ್ಲಿ ಕಳೆದ ೪೦ ವರ್ಷಗಳಿಂದಲೂ ಚಪ್ಪಲಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು.
ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ
ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಅಂಗವಾಗಿ ಬೆಳ್ಳಿ ರಥದಲ್ಲಿ ಇಡಲಾಗಿದ್ದ ಚೆನ್ನಮ್ಮರವರ ಭಾವಚಿತ್ರಕ್ಕೆ ಕ್ಷೇತ್ರದ ಶಾಸಕ ಸ್ವರೂಪ್ ಪುಷ್ಪಾರ್ಚನೆ ಮಾಡುವುದರ ಮೂಲಕ ಚಾಲನೆ ನೀಡಿದರು. ಕಿತ್ತೂರು ರಾಣಿ ಚೆನ್ನಮ್ಮ ಮೊಟ್ಟಮೊದಲ ವೀರ ಮಹಿಳೆ, ಹೋರಾಟಗಾರ್ತಿ ಆಗಿದ್ದಾರೆ ಎಂದರು. ಬ್ರಿಟೀಷರ ವಿರುದ್ಧ ಹೋರಾಟ ಮಾಡಿ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಧೀರ ಮಹಿಳೆಯಾಗಿ ಆಗಿನ ಕಾಲದಲ್ಲೇ ಬ್ರಿಟೀಷರ ಕ್ರೌರ್ಯಕ್ಕೆ ಎದೆಗುಂದದೆ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ ಅವರು ಎಲ್ಲರಿಗೂ ಮಾದರಿ ಆಗಿದ್ದಾರೆ ಎಂದರು.
ಜಲಮೂಲಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು
ಕಾವೇರಿ ನದಿ ತೀರದ ಪ್ರತಿಯೊಬ್ಬರೂ ಸ್ವಚ್ಛ ಕಾವೇರಿ ನದಿಗಾಗಿ ಶುದ್ಧ ಮನಸ್ಸಿನಿಂದ ಎಲ್ಲರೂ ಸ್ವಚ್ಛತಾ ಬಗ್ಗೆ ಕೈಜೋಡಿಸಬೇಕು ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ರಾಜ್ಯ ಸಂಚಾಲಕರಾದ ಕುಶಾಲನಗರ ಚಂದ್ರಮೋಹನ್ ಮನವಿ ಮಾಡಿದರು. ರಾಮನಾಥಪುರ ಶ್ರೀ ರಾಮೇಶ್ವರಸ್ವಾಮಿ ದಂಡೆಯಲ್ಲಿರುವ ವಹ್ನಿಪುಕ್ಷರಣೆಯಲ್ಲಿ 132ನೇಯ ತಿಂಗಳ ಹುಣ್ಣಿಮೆಯ ಕಾವೇರಿ ಮಹಾ ಆರತಿಯನ್ನು ಕೊಡಗು ಜಿಲ್ಲಾ ಹಾಗೂ ಹಾಸನ ಜಿಲ್ಲಾ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ, ಶರಣ ಸಾಹಿತ್ಯ ಪರಿಷತ್, ಕರ್ನಾಟಕ ಮತ್ತು ತಮಿಳುನಾಡು ಅಖಿಲ ಭಾರತ ಸನ್ಯಾಸಿಗಳ ಸಂಘ ಸಂಯುಕ್ತಾಶ್ರಯದಲ್ಲಿ ನಡೆಸಲಾಯಿತು.
ಶಾಲೆ ವಿದ್ಯಾರ್ಥಿಗಳಿಗೆ ರೈಲ್ವೆ ಪೊಲೀಸ್‌ ಮಾರ್ಗದರ್ಶನ
ಮಾದಕ ವಸ್ತು ಬಾಲ್ಯ ವಿವಾಹ ಮತ್ತು ಅಪರಿಚಿತರು ಯಾವುದೇ ಆಹಾರ ವಸ್ತುಗಳನ್ನು ನೀಡಿದರೆ ಪಡೆಯಬಾರದು. ನೀವು ಅಪರಿಚಿತರು ಕರೆದರೆ ಯಾವುದೇ ವಾಹನಗಳನ್ನು ಹತ್ತಬಾರದು. ರಸ್ತೆಯನ್ನು ದಾಟುವಾಗ ಮತ್ತು ಇತರ ಕಡೆ ಸಂಚರಿಸುವಾಗ ಬಹಳ ಎಚ್ಚರಿಕೆಯನ್ನು ವಹಿಸಬೇಕು ಎಂದರು. ಅಪ್ರಾಪ್ತರ ವಿವಾಹ ಆಗುವ ಮಾಹಿತಿ ನಿಮಗೆ ಸಿಕ್ಕರೆ ಅದನ್ನು ತಿಳಿಸಬೇಕು ಎಂದ ಅವರು, ಸರಕಾರಿ ಶಾಲೆಗಳಲ್ಲಿ ಓದಿ ಅನೇಕ ಮಹನೀಯರುಗಳು ರಾಷ್ಟ್ರದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ರೈಲ್ವೆ ಸಬ್ ಇನ್ಸ್ಪೆಕ್ಟರ್‌ ಮಹೇಶ್ ಇ. ಜಿ ಸ್ಫೂರ್ತಿದಾಯಕ ಮಾತನಾಡಿದರು.
  • < previous
  • 1
  • ...
  • 262
  • 263
  • 264
  • 265
  • 266
  • 267
  • 268
  • 269
  • 270
  • ...
  • 510
  • next >
Top Stories
ಗೂಂಡಾಕಾಯ್ದೆಯಡಿ ಬಂಧನದ ಗರಿಷ್ಠ ಅವಧಿ 1 ವರ್ಷ
‘ವಿಧೇಯಕ ಮಂಡನೆಗೆ 2 ದಿನ ಮೊದಲೇ ಮಾಹಿತಿ’
ಬಡತನದಲ್ಲೂ ಮಗನ ಓದಿಸುತ್ತಿದ್ದ ತಾಯಿ
ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಹೊರ ರಾಜ್ಯದವರಿಗೂ ಅನ್ನಭಾಗ್ಯ : ಅಕ್ಕಿ ವಂಚನೆ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved