• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಮಲಗಿದ ವೇಳೆ ಕಚ್ಚಿದ ನಾಗರ ಹಾವು
ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದು, ಮಲಗಲು ಮೊದಲ ಮಹಡಿಗೆ ಹೋಗಿದ್ದಾರೆ. ನಾಗರ ಹಾವು ಕಾಲಿಗೆ ಕಚ್ಚಿದರೂ ಅರಿವಿಲ್ಲದೆ ಹಾಗೆಯೇ ಮಲಗಿದ್ದು, ಬೆಳಿಗ್ಗೆ ೮ ಗಂಟೆ ಆದರೂ ರೂಂನ ಬಾಗಿಲು ತೆಗೆಯಲಿಲ್ಲ. ಅನುಮಾನಗೊಂಡ ಪತ್ನಿ ಬಾಗಿಲು ತೆಗೆದಾಗ ಸಾವನ್ನಪ್ಪಿರುವ ಬಗ್ಗೆ ತಿಳಿದಿದೆ. ಗುರು (ಪಪ್ಪಣಿ) ಎಂಬ ೪೦ ವರ್ಷದ ವ್ಯಕ್ತಿ ಹಾವಿನಿಂದ ಕಚ್ಚಿಸಿಕೊಂಡು ಸಾವನ್ನಪ್ಪಿದ ದರ್ದೈವಿ. ಮೂಲತಃ ಚನ್ನರಾಯಪಟ್ಟಣ ತಾಲೂಕಿನ ತಾಲೂಕಿನ ನಲ್ಲೂರು ಗ್ರಾಮದವರು.
ಸಂತೆ ವ್ಯಾಪಾರಸ್ಥರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ
ಚನ್ನರಾಯಪಟ್ಟಣ ಪಟ್ಟಣದ ಸಂತೆ ಮೈದಾನದಲ್ಲಿ ಸಾರ್ವಜನಿಕರಿಗೆ ಮತ್ತು ಸಂತೆಯಲ್ಲಿ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ಪಟ್ಟಣದ ರೊಟರಿ ಕ್ಲಬ್ ಹಾಗೂ ರೊಟ್ರ್ಯಾಕ್ಟ್ ಕ್ಲಬ್ ಮಿಟ್ಟೌನ್ ಹಾಸನ ಏಡ್ಸ್ ಜಾಗೃತಿ ದಳ ಸಾರ್ವಜನಿಕ ಆಸ್ಪತ್ರೆ, ಹಾಸನ ಇವರ ವತಿಯಿಂದ ಉಚಿತ ರಕ್ತದ ಒತ್ತಡ ಮತ್ತು ಮಧುಮೇಹ, ರಕ್ತದ ಗುಂಪು ಪರೀಕ್ಷೆ ಹಾಗೂ ಏಡ್ಸ್ ಪರೀಕ್ಷೆ ಮತ್ತು ಏಡ್ಸ್ ಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸುಮಾರು ೧೨೦ ಜನ ಇದರ ಉಪಯೋಗವನ್ನು ಪಡೆದುಕೊಂಡರು.
ಮಂಜ್ರಾಬಾದ್‌ ಕೋಟೆ ಬಳಿ ಸ್ಥಳೀಯರ ಪ್ರತಿಭಟನೆ
ದೋಣಿಗಾಲ್ ಗ್ರಾಮದಲ್ಲಿರುವ ಮಂಜ್ರಾಬಾದ್ ಕೋಟೆ ವೀಕ್ಷಣೆಗೆ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು, ಕೋಟೆ ವೀಕ್ಷಣೆಗೆ ರಾಷ್ಟ್ರೀಯ ಹೆದ್ದಾರಿ ೭೫ ಹಾಗೂ ಕಲ್ಗಣೆ, ಹುಲ್ಲಹಳ್ಳಿ, ಕ್ಯಾನಹಳ್ಳಿ,ಕುಣಿಗಾಲ್ ಗ್ರಾಮ ಸಂಪರ್ಕಿಸುವ ರಾಜ್ಯ ಹೆದ್ದಾರಿ ೧೧೭ರಲ್ಲಿ ಪ್ರವಾಸಿಗರು ಅಡ್ಡಾದಿಡ್ಡಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಮಂಜ್ರಾಬಾಭಾದ್ ಕೋಟೆ ಪ್ರದೇಶದಲ್ಲಿ ನಿತ್ಯ ವಾಹನ ದಟ್ಟಣೆಯಾಗುತ್ತಿದ್ದು, ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಳ್ಳುತ್ತಿದೆ ಎಂದು ವಿವಿಧ ಗ್ರಾಮಸ್ಥರು ಶನಿವಾರ ದೋಣಿಗಾಲ್ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.
ಊರ ಹಬ್ಬದಂತೆ ಹಾಸನಾಂಬ ಜಾತ್ರೆ ಆಚರಿಸಿ
ಹಾಸನಾಂಬ ಮತ್ತು ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವವನ್ನು ಊರಿನ ಹಬ್ಬದಂತೆ ಆಚರಿಸಬೇಕು. ಬರುವ ಭಕ್ತಾದಿಗಳಿಗೆ ಯಾವ ತೊಂದರೆ ಆಗದಂತೆ ಕೊಟ್ಟಿರುವ ಜವಾಬ್ದಾರಿಯನ್ನು ವಿವಿಧ ಇಲಾಖೆ ಅಧಿಕಾರಿಗಳು, ಹಾಗೂ ಸಂಘ ಸಂಸ್ಥೆಗಳು ನಿರ್ವಹಿಸುವಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಕರೆ ಕೊಟ್ಟರು. ಈ ಬಾರಿಯೂ ಕೂಡ ಮುಖ್ಯಮಂತ್ರಿಯನ್ನು ಆಹ್ವಾನ ಮಾಡಲಾಗಿದೆ. ಇದೇ ತಿಂಗಳ ೨೮ಕ್ಕೆ ಹಾಸನಾಕ್ಕೆ ಬರುವುದಾಗಿ ಹೇಳಿದ್ದು, ಇದಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮಹಿಳೆಯರಿಗೆ ಹೊಲಿಗೆ ಯಂತ್ರಗಳ ವಿತರಣೆ
ಗ್ರಾಮೀಣ ಭಾಗದ ಜನರ ಸ್ವಾವಲಂಬಿ ಬದುಕಿಗೆ ಆಸರೆಯಾಗುವ ಉಪಕರಣಗಳನ್ನು ೮೦ ಮಂದಿ ಫಲಾನುಭವಿಗಳಿಗೆ ವಿತರಣೆ ಮಾಡಿ ಮಾತನಾಡಿದ ಶಾಸಕರು, ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಸರ್ಕಾರ ಹಲವು ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದೆ. ತಾಲೂಕು ಪಂಚಾಯಿತಿ ಆವರಣದಲ್ಲಿ ಜಿಲ್ಲಾ ಔದ್ಯಮಿಕ ಕೇಂದ್ರ ಯೋಜನೆ ಮತ್ತು ವೃತ್ತಿಪರ ಕುಶಲಕರ್ಮಿಗಳ ಸುಧಾರಿತ ಉಪಕರಣಗಳ ವಿತರಣೆ ಯೋಜನೆಯಡಿ, ಇಲಾಖೆ ವತಿಯಿಂದ ಸ್ವ ಉದ್ಯೋಗ ಮಾಡಬಯಸುವ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಶಾಸಕ ಸಿ. ಎನ್. ಬಾಲಕೃಷ್ಣ ವಿತರಿಸಿದರು.
ನೀರಾವರಿ ಯೋಜನೆಗೆ ತೊಡಕಾಗಿದ್ದ ಸ್ಥಳಕ್ಕೆ ಡಿಸಿ ಭೇಟಿ
ಚನ್ನರಾಯಪಟ್ಟಣದ ತಾಲೂಕಿನ ಸಂತೇ ಶಿವರ ಹಾಗೂ ಅಗ್ರಹಾರ ಬೆಳಗುಲಿ ಗ್ರಾಮಗಳ ಕೆರೆ ತುಂಬಿಸುವ ಸಲುವಾಗಿ ಕಾರೇಹಳ್ಳಿ ಸಮೀಪ ಜಾಬ್ ಘಟ್ಟ ಗ್ರಾಮದ ಬಳಿ ಇರುವ ಹೇಮಾವತಿ ನಾಲೆಯಿಂದ ಪೈಪ್‌ಲೈನ್ ಮೂಲಕ ನೀರು ಹರಿಸುವ ಯೋಜನೆಗೆ ಓರ್ವ ರೈತನ ವಿರೋಧದಿಂದ ಕಳೆದ ಅನೇಕ ತಿಂಗಳುಗಳಿಂದ ಕಾಮಗಾರಿ ಸ್ಥಗಿತಗೊಂಡಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿ ಸತ್ಯಭಾಮ ಭೇಟಿ ನೀಡಿ ರೈತರೊಂದಿಗೆ ಶುಕ್ರವಾರ ಸಂಜೆ ಮಾತುಕತೆ ನಡೆಸಿದರು.
ಗೋಧಿ ಕಳ್ಳ ಸಾಗಾಣಿಕೆ ಲಾರಿ ತಡೆದ ಗ್ರಾಮಸ್ಥರು
ತಮಿಳುನಾಡಿಗೆ ಲಾರಿ ಮೂಲಕ ಗೋಧಿ ಕಳ್ಳ ಸಾಗಾಣಿಕೆಯಾಗುತ್ತಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಲಾರಿ ತಡೆದು ಚಾಲಕನನ್ನು ತಡೆದು ಸ್ಥಳೀಯರು ಪ್ರಶ್ನಿಸಿದಲ್ಲದೇ ಲಾರಿ ಚಾಲಕನನ್ನು ತರಾಟೆಗೆ ತೆಗೆದುಕೊಂಡರು. ಸಕಲೇಶಪುರ ತಾಲೂಕಿನ, ಬಾಳ್ಳುಪೇಟೆಯ ಎಮ್‌ಎಸ್‌ಪಿಟಿಸಿಯಿಂದ ತಮಿಳುನಾಡಿಗೆ ಗೋಧಿ ಸಾಗಾಣಿಕೆ ಮಾಡುತ್ತಿರುವುದಾಗಿ ಲಾರಿ ಚಾಲಕನು ಈ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾನೆ.
ನಿಮ್ಮ ಭವಿಷ್ಯ ನಿಮ್ಮ ಕೈಲಿದೆ ಎಂದ ಹಾಸನ ವಿವಿ ಕುಲಪತಿ
ಪ್ರಸ್ತುತದಲ್ಲಿ ವಿದ್ಯಾರ್ಥಿಗಳು ದುಶ್ಚಟಗಳು ಸೇರಿದಂತೆ ಇನ್ನಿತರೆ ಯಾವುದಕ್ಕೂ ಮರುಳಾಗದೇ ಓದುವ ಕಡೆ ಹೆಚ್ಚಿನ ಗಮನ ಕೊಟ್ಟರೇ ಮುಂದೆ ಉತ್ತಮ ಭವಿಷ್ಯ ನಿಮ್ಮದಾಗುತ್ತದೆ. ನಿಮ್ಮ ಭವಿಷ್ಯ ನಿಮ್ಮ ಕೈಲೆ ಇದೆ ಎಂದು ಹಾಸನ ವಿವಿ ಕುಲಪತಿ ತಾರಾನಾಥ್ ತಿಳಿಸಿದರು. ಹಾಸನ ಡಿವೈಎಸ್ಪಿ ಮುರಳೀಧರ್‌ ಮಾತನಾಡಿ, ಇಂದಿನ ಅನೇಕ ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗುತ್ತಾರೆ. ದುಶ್ಚಟಗಳಿಂದ ದೂರವಿರಬೇಕೆಂದು ಕಿವಿಮಾತು ಹೇಳಿದರು.
ಶಿಕ್ಷಕ ಈರೇಶ್ ನಾಮಪತ್ರ ಸಲ್ಲಿಕೆ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೇಲೂರು ತಾಲೂಕು ಶಾಖೆಯ ಐದು ವರ್ಷಗಳ ಅವಧಿಯ ನಿರ್ದೇಶಕರ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಲ್ಲಿಕಾರ್ಜುನಪುರ ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕ ಈರಯ್ಯ ಜಿ.ಜೆ (ಈರೇಶ್)ರವರು ಅಪಾರ ಸ್ನೇಹ ಬಳಗದೊಂದಿಗೆ ಇಂದು ನಾಮಪತ್ರ ಸಲ್ಲಿಸಿದರು.
ದೇವರಮುದ್ದನಹಳ್ಳಿ ಮೂಡಲಹಿಪ್ಪೆ ಸಂಪರ್ಕ ರಸ್ತೆ ಗುಂಡಿ
ಹಳ್ಳಿಮೈಸೂರು ಹೋಬಳಿಯ ದೇವರಮುದ್ದನಹಳ್ಳಿಯಿಂದ ಮೂಡಲಹಿಪ್ಪೆ ಗ್ರಾಮಕ್ಕೆಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಗುಂಡಿಗಳು ಬಿದ್ದಿರುವ ಜತೆಗೆ ಕಿರು ಸೇತುವೆಯೊಂದು ಕುಸಿದಿರುವ ಕಾರಣದಿಂದ ಬಸ್ ಸಂಚಾರವಿಲ್ಲದೇ ವಿದ್ಯಾರ್ಥಿಗಳ ಪಾಡು ಶೋಚನೀಯವಾಗಿದ್ದರೂ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳದೇ ಇರುವುದಕ್ಕೆ ಗ್ರಾಮೀಣ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
  • < previous
  • 1
  • ...
  • 266
  • 267
  • 268
  • 269
  • 270
  • 271
  • 272
  • 273
  • 274
  • ...
  • 510
  • next >
Top Stories
ಹೊರ ರಾಜ್ಯದವರಿಗೂ ಅನ್ನಭಾಗ್ಯ : ಅಕ್ಕಿ ವಂಚನೆ
ನನಗೆ ಏಡ್ಸ್‌ ಬಂದಿಲ್ಲ: ಉಗ್ರ ಇಸ್ಲಾಂಮತ ಪ್ರಚಾರಕ ಝಾಕಿರ್‌ ನಾಯ್ಕ್‌
ಹಾಸನ ದುರಂತದಲ್ಲಿ ಮೃತರ ಸಂಖ್ಯೆ 10ಕ್ಕೆ
ಹಿಂದೂ ಸಮಾಜದಲ್ಲಿ ಸಮಾನತೆ ಇದ್ದಿದ್ದರೆ ಜನ ಏಕೆ ಮತಾಂತರಗೊಳ್ಳುತ್ತಿದ್ದರು? : ಸಿದ್ದರಾಮಯ್ಯ
ವಿರೋಧ ನಡುವೆ ಇಂದು ಭಾರತ vs ಪಾಕ್‌ ಕ್ರಿಕೆಟ್‌
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved