ಶ್ರೀಕೃಷ್ಣನ ಸಂದೇಶಗಳು ಸರ್ವಕಾಲಿಕ ಶ್ರೀ ಕೃಷ್ಣ ಪರಮಾತ್ಮನು ನೀಡಿದಂತಹ ಸಂದೇಶಗಳು ಸಾರ್ವಕಾಲಿಕ ಸತ್ಯವಾಗಿದ್ದು, ಸರ್ವರೂ ಶ್ರೀ ಕೃಷ್ಣ ಸಂದೇಶಗಳನ್ನು ಪಾಲಿಸುವದರ ಮೂಲಕವಾಗಿ ತಮ್ಮ ಜೀವನವನ್ನು ಪಾವನ ಮಾಡಿಕೊಳ್ಳಬೇಕು. ಶ್ರೀ ಕೃಷ್ಣನು ಅನೇಕ ಅವತಾರಗಳಲ್ಲಿ ಜನಿಸಿ ಮನುಕುಲಕ್ಕೆ ಸಂದೇಶಗಳನ್ನು ನೀಡಿದ್ದಾನೆ. ನಾವು ಕೊನೆಯ ತನಕವೂ ಕೂಡ ಪರೋಪಕಾರಿ, ಸಹಬಾಳ್ವೆ, ಸಾಮರಸ್ಯದಿಂದ ಇರಬೇಕು. ಅಸೂಯೆ, ದ್ವೇಷಗಳನ್ನು ಬಿಟ್ಟು ನಾವೆಲ್ಲರೂ ಒಂದು ಎಂಬ ಭಾವನೆ ಮೂಡಬೇಕು ಎಂಬ ಸಂದೇಶ ನೀಡಿದ ಶ್ರೀ ಕೃಷ್ಣನು ದಾರ್ಶನಿಕ ವ್ಯಕ್ತಿ ಎಂದು ತಾಲೂಕು ಯಾದವ ಸಂಘದ ಗೌರವಾಧ್ಯಕ್ಷ ಅಣ್ಣೇಗೌಡ ಹೇಳಿದರು.