ಹಿರಿಯರಿಂದ ಸಂಸ್ಕೃತಿ, ಸಂಸ್ಕಾರ ದೊರೆಯುತ್ತದೆ: ಶಂಭುನಾಥ ಸ್ವಾಮೀಜಿಪ್ರತಿ ಮನೆಯಲ್ಲಿ ಹಿರಿಯರಿದ್ದರೆ ಸಂಸ್ಕೃತಿ ಮತ್ತು ಸಂಸ್ಕಾರಗಳು ತಾವಾಗಿಯೇ ದೊರೆಯುತ್ತವೆ. ಅದಕ್ಕಾಗಿ ಮಕ್ಕಳನ್ನು ಹಿರಿಯರ ಸಮ್ಮುಖದಲ್ಲಿ ಬೆಳೆಸಬೇಕು ಎಂದು ಆದಿಚುಂಚನಗಿರಿಯ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಹೇಳಿದರು. ಅರಸೀಕೆರೆಯ ಆದಿಚುಂಚನಗಿರಿ ಆಂಗ್ಲ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಚುಂಚಸುರಭಿ ೨೦೨೪ರ ಕಾರ್ಯಕ್ರಮದಲ್ಲಿ ಮಾತಬನಾಡಿದರು.