ಪೋಷಕರು ಮಕ್ಕಳಿಗೆ ಮೊಬೈಲ್ ಕೊಡಬೇಡಿಮಕ್ಕಳ ಪೋಷಕರು ಮಕ್ಕಳಿಗೆ ಮೊಬೈಲ್ ಕೊಟ್ಟು ಅಭ್ಯಾಸ ಮಾಡಬೇಡಿ. ಮಕ್ಕಳ ಜೊತೆ ನೀವು ಸೇರಿ ನೀತಿ ಕಥೆ, ಹಾಡು, ನೃತ್ಯ, ಜಾನಪದ ಗೀತೆಗಳು, ಮಕ್ಕಳ ಚಲನ, ವಲನ ಹಾಗೂ ಪಾಲನೆಗೆ ಹೆಚ್ಚಿನ ಗಮನಕೊಡಬೇಕು ಎಂದು ಪೋಷಕರಿಗೆ ಕನಸು ಮತ್ತು ಬೇಗೂರು ಸೌಹಾರ್ದ ಸಂಸ್ಥೆಯ ಸಂಸ್ಥಾಪಕರಾದ ಶ್ರೀಮತಿ ಜಿ.ಆರ್. ಚಂದ್ರಕಲಾ ಮನವರಿಕ ಮಾಡಿದರು. ಹಾಸನ ನಗರದ ತಣ್ಣೀರುಹಳ್ಳದಲ್ಲಿರುವ ಪ್ರಜ್ವಲ್ ವಿದ್ಯಾ ಕಿಡ್ಸ್ ಶಾಲೆಯಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿಯಲ್ಲಿ ಪಾಲ್ಗೊಂಡರು.