ಗೊರೂರು ರಾಮಸ್ವಾಮಿ ಅಯ್ಯಂಗಾರ್ ಜಯಂತ್ಯುತ್ಸವಗೊರೂರು ಗ್ರಾಮದಲ್ಲಿ ಇತ್ತೀಚಿಗೆ ಹಮ್ಮಿಕೊಂಡಿದ್ದ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ರವರ ಜನ್ಮ ಜಯಂತ್ಯುತ್ಸವ ಕಾರ್ಯಕ್ರಮವನ್ನು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಕೃಷ್ಣ ಉದ್ಘಾಟಿಸಿದರು. ನಂತರ ಮಾತನಾಡಿ ಗೊರೂರರ ಜಯಂತಿ ಅಂಗವಾಗಿ ಗಾಂಧಿ ಮತ್ತು ಡಾ.ಗೊರೂರರ ವಿಚಾರ ಗೋಷ್ಠಿ, ರಾಜ್ಯಮಟ್ಟದ ಕವಿಗೋಷ್ಠಿ. ಪುಸ್ತಕ ಬಿಡುಗಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅವರು ಜನ್ಮಪಡೆದ ಮಣ್ಣಿನಲ್ಲಿ ಇಡೀ ದಿನ ಆಯೋಜನೆ ಮಾಡಿರುವುದು ಹೆಚ್ಚು ಅರ್ಥ ಪೂರ್ಣವಾಗಿದೆ ಎಂದು ಬಣ್ಣಿಸಿದರು.