ಸಿಎಂ ಬದಲಾವಣೆ ಸುದ್ದಿ ಕೇವಲ ವದಂತಿ: ಯತೀಂದ್ರ ಸಿದ್ದರಾಮಯ್ಯಲೋಕಸಭಾ ಚುನಾವಣೆ ಬಳಿಕ ಸಿಎಂ ಬದಲಾವಣೆ ಸುದ್ದಿಗಳೆಲ್ಲ ಕೇವಲ ಊಹಾಪೋಹ. ಸರ್ಕಾರ ಐದು ವರ್ಷಗಳ ಅವಧಿ ಪೂರೈಸುತ್ತದೆ. ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ ಎಂಬ ನಂಬಿಕೆ ಇದೆ ಎಂದು ಶಾಸಕ ಯತೀಂದ್ರ ಸಿದ್ಧರಾಮಯ್ಯ ಹೇಳಿದರು. ಶೀಗೆತಾಳಮ್ಮ ದೇವಾಲಯದ ಆವರಣದಲ್ಲಿ ನಿರ್ಮಿಸಿರುವ ಸಭಾಮಂಟಪ, ವಸತಿ ಗೃಹಗಳು ಮತ್ತು ಪಾಕಶಾಲಾ ಕೊಠಡಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.