ದೇಶದ ಅಭಿವೃದ್ಧಿಯಲ್ಲಿ ಎಲ್‌ಐಸಿಯ ಕೊಡುಗೆ ಅಪಾರ೬೮ನೇ ವಿಮಾ ಸಪ್ತಾಹದ ಅಂಗವಾಗಿ ಪಟ್ಟಣದ ಜೀವ ವಿಮಾ ಶಾಖಾ ಕಚೇರಿ ವತಿಯಿಂದ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿ ಬೈಕ್ ಜಾಥಾ ಹಮ್ಮಿಕೊಂಡಿದ್ದರು. ಬೈಕ್ ಜಾಥಾವನ್ನು ಉದ್ದೇಶಿಸಿ ಮಾತನಾಡಿದ ಶಾಖಾಧಿಕಾರಿ ಸಿ.ಜೆ. ರಾಘವೇಂದ್ರ, ದೇಶದ ಅಭಿವೃದ್ಧಿಯಲ್ಲಿ ಎಲ್‌ಐಸಿಯ ಕೊಡುಗೆ ಅಪಾರವಾಗಿದೆ. ವಿಶ್ವಾಸಾರ್ಹತೆ ಉಳ್ಳ ಏಕೈಕ ಸಂಸ್ಥೆ ಜೀವವಿಮಾ ಸಂಸ್ಥೆಯಾಗಿದ್ದು. ದೇಶದ ಎಲ್ಲಾ ಪಟ್ಟಣ ಹಾಗೂ ಹಳ್ಳಿಗಳಲ್ಲೂ ಕೂಡ ನಂಬಿಕೆಯನ್ನು ಉಳಿಸಿಕೊಂಡಿದೆ ಎಂದರು. ಪಟ್ಟಣದ ಶಾಖಾ ಕಚೇರಿಯಿಂದ ಹೊರಟ ಬೈಕ್ ಜಾಥಾ ಧಾನಲಕ್ಷ್ಮಿ ಚಿತ್ರಮಂದಿರ, ಮೈಸೂರು ರಸ್ತೆ, ಹಾಗೂ ಎಪಿಎಂಸಿ ತಲುಪಿ ನಂತರ ಕೆ.ಆರ್. ವೃತ್ತ ತಲುಪಿ ನವೋದಯ ವೃತ್ತದ ಮೂಲಕ ಶಾಖಾ ಕಚೇರಿ ಬಳಿ ಬಂದರು.