• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ನೀರಿನ ವಾಲ್ವ್‌ ತೆರವುಗೊಳಿಸದಂತೆ ಒತ್ತಾಯ
ಪುರಸಭೆ ವ್ಯಾಪ್ತಿಯ ೧೭ನೇ ವಾರ್ಡಿನ ೨ನೇ ಬೀದಿಯಲ್ಲಿನ ಮೇಲ್ಬಾಗದ ಕೆಲ ಮನೆಗಳಿಗೆ ಕುಡಿಯುವ ನೀರು ನಲ್ಲಿಗಳಲ್ಲಿ ಬಾರದೆ ನೇರವಾಗಿ ಇಳಿಜಾರಿಗೆ ಹೋಗುತಿದ್ದುದರಿಂದ ನೀರು ಪೋಲಾಗುತಿತ್ತು. ಇದನ್ನು ತಡೆಗಟ್ಟಿದರೆ ಮೇಲ್ಭಾಗದ ಮನೆಗಳಿಗೂ ನೀರು ಸಿಗುವಂತೆ ಮಾಡಿ ಎಂದು ಎಲ್ಲರೂ ಸಹಿ ಮಾಡಿ ಮನವಿ ಸಲ್ಲಿಸಿದ್ದರಿಂದ ಅಧಿಕಾರಿಗಳು ಸಿಬ್ಬಂದಿ ಕಳುಹಿಸಿ ಕಂಟ್ರೋಲ್ ವಾಲ್ ಅಳವಡಿಸಿದ್ದರು. ಆದರೆ ಈ ವಿಚಾರವನ್ನು ಸರಿಯಾಗಿ ತಿಳಿದುಕೊಳ್ಳದೆ ವೈಯಕ್ತಿಕ ಕಾರಣಗಳಿಗಾಗಿ ಇಲ್ಲಿ ಹಾಕಿರುವ ಕಂಟ್ರೋಲ್ ವಾಲ್ ತೆಗೆಯುವಂತೆ ಅಧಿಕಾರಿ ಮತ್ತು ಅಧ್ಯಕ್ಷರಿಗೆ ಕೆಲವರು ಒತ್ತಡ ಹಾಕುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ಸ್ಥಳೀಯರು ಸೇರಿ ವಾಲ್ ಇರುವ ಸ್ಥಳದಲ್ಲೆ ಸೇರಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು.
ನಾನು ಶಾಸಕನಲ್ಲ ಜನಸೇವಕ ಎಂದ ಎಚ್ ಕೆ ಸುರೇಶ್‌
ಬೇಲೂರು ಶಾಸಕ ಎಚ್‌ ಕೆ ಸುರೇಶ್‌ ಹುಟ್ಟುಹಬ್ಬ ಹಿನ್ನೆಲೆ ಆಶಾಕಾರ್ಯಕರ್ತರು, ಪೌರಕಾರ್ಮಿಕರಿಗೆ ಗೌರವ ಸನ್ಮಾನ ಮಾಡಲಾಗಿದೆ. ರೈತರಿಗೆ ಉಚಿತವಾಗಿ ಗಿಡಗಳನ್ನು ನೀಡಲಾಗಿದೆ. ಜೊತೆಗೆ ರಕ್ತದಾನ ಮಹಾದಾನ ಎಂಬ ಹಿನ್ನೆಲೆಯಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಸಲಾಗಿದೆ. ನಾನು ಎಂದಿಗೂ ಶಾಸಕನಲ್ಲ, ಬದಲಾಗಿ ನಿಮ್ಮ ಸೇವಕ ಎಂಬ ಭಾವನೆಯಿಂದ ಕಾರ್ಯನಿರ್ವಹಿಸುತ್ತಿದ್ದೇನೆ.ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುವುದುನನ್ನ ಮೂಲ ಗುರಿಯಾಗಿದೆ. ಇಲ್ಲಿನ ಜನರ ಕಷ್ಟಗಳನ್ನು ನಾನು ವಿಧಾನಸಭೆ ಚುನಾವಣೆ ಪೂರ್ವದಲ್ಲೇ ಅರಿತಿದ್ದೇನೆ ಎಂದು ಶಾಸಕರು ಹೇಳಿದರು.
ಎತ್ತಿನಹೊಳೆ ಯೋಜನೆಗೆ ಭಗೀರಥ ಪ್ರಯತ್ನ
ಎತ್ತಿನಹೊಳೆ ಯೋಜನೆ ತುಮಕೂರು ಕೋಲಾರದವರೆಗೆ ನೀರು ಹರಿಸೋ ಯೋಜನೆ. ೨೦೧೪ರಲ್ಲಿ ಸಿದ್ದರಾಮಯ್ಯ ಅವರು ಈ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ಆಗ ಈ ಯೋಜನೆ ಜಾರಿ ಆಗುವುದಿಲ್ಲ ಎಂದು ಈ ಜಿಲ್ಲೆಯ ವಿರೋಧಿ ಬಣ ಹೇಳುತ್ತಾ ಬಂದಿತ್ತು. ಆದರೆ ಈಗ ಆ ಯೋಜನೆ ಫಲಪ್ರದವಾಗಿದೆ. ಸೆಪ್ಟೆಂಬರ್ ೬ರಂದು ನಡೆಯುವ ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ, ಫಲಾನುಭವಿ ಜಿಲ್ಲೆ ಹಾಗೂ ತಾಲೂಕುಗಳ ಶಾಸಕರು, ಸಚಿವರು ಭಾಗಿಯಾಗುತ್ತಾರೆ. ಒಂದೇ ಪಂಪ್‌ನಿಂದ ಹರಿಯುತ್ತಿರುವ ನೀರಿನಿಂದ ಈಗಾಗಲೆ ಹಲವು ಕೆರೆಗಳು ತುಂಬಿವೆ. ಇನ್ನೂ ನಾಲ್ಕು ವಿಯರ್‌ಗಳಿಂದ ನೀರು ಹರಿಯುವ ಯೋಜನೆಗೆ ಚಾಲನೆ ಸಿಗಲಿದೆ ಎಂದು ಶಾಸಕ ಶಿವಲಿಂಗೇಗೌಡ ತಿಳಿಸಿದರು.
ಪ್ರತಿಯೊಬ್ಬರೂ ತಾಯಿಯ ಹೆಸರಲ್ಲಿ ಒಂದು ಗಿಡ ನೆಡಿ
ತಾಯಿಯ ಹೆಸರಿನಲ್ಲಿ ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸು ಲಭಿಸುತ್ತದೆ. ತಾಯಿ ವರ್ಣಿಸಲು ಅಸಾಧ್ಯವಾದ ಸಂಬಂಧ ಹಾಗೂ ಪೂಜ್ಯ ಭಾವನೆ ಇರುವ ಕಾರಣದಿಂದ "ತಾಯಿಯ ಹೆಸರಿನಲ್ಲಿ ಒಂದು ಮರ " ಎಂಬ ವಿಶೇಷ ಯೋಜನೆಯಡಿ ಪ್ರತಿಯೊಬ್ಬರು ಒಂದು ಗಿಡ ನೆಟ್ಟು ಪೋಷಿಸುವ ಮೂಲಕ ಪರಿಸರ ರಕ್ಷಣೆಯ ಜತೆಗೆ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ನೀಡುವ ವಿನೂತನ ಕಾರ್ಯಕ್ರಮದಲ್ಲಿ ನಾವುಗಳು ಕೈ ಜೋಡಿಸಿ, ಗಿಡಗಳನ್ನು ನೆಟ್ಟು ಪೋಷಿಸೋಣವೆಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ ಮಹಾಂತೇಶ್ ಮುನವಳ್ಳಿ ಮಠ್ ಸಲಹೆ ನೀಡಿದರು.
ಅರಸೀಕೆರೆಯಲ್ಲಿ ಬಾಂಗ್ಲಾ ನುಸುಳುಕೋರ ಮತದಾರರು
ಬಾಂಗ್ಲಾದೇಶದಿಂದ ಭಾರತದ ಗಡಿ ನುಸುಳಿ ಬಂದಂತಹ ಅಕ್ರಮ ವಲಸಿಗರು ಅರಸೀಕೆರೆ ತಾಲೂಕು ಒಂದರಲ್ಲೆ ಮೂರರಿಂದ ಮೂರೂವರೆ ಸಾವಿರದಷ್ಟು ಮತದಾರರಾಗಿದ್ದಾರೆ. ಇಂತಹ ನುಸುಳುಕೋರರಿಗೆ ನಕಲಿ ದಾಖಲೆ ಸೃಷ್ಟಿಸಿ ಆಧಾರ್ ನೋಂದಣಿ ಮಾಡುತ್ತಿರುವ ಜಾಲದ ಮೂಲವನ್ನು ಮೊದಲು ಪತ್ತೆಹಚ್ಚಿ ಇಷ್ಟು ದೊಡ್ಡ ದೇಶದ್ರೋಹಿ ಜಾಲಕ್ಕೆ ಕಡಿವಾಣ ಹಾಕಬೇಕೆಂದು ಜೆಡಿಎಸ್ ಪಕ್ಷದ ಮುಖಂಡ ಎನ್.ಆರ್‌. ಸಂತೋಷ್ ಆಗ್ರಹಿಸಿದರು. ಕೆಲ ದಿನಗಳ ಹಿಂದೆ ಹಾಸನ ನಗರದ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟದಲ್ಲೇ ಇರುವ ಆಧಾರ್ ನೋಂದಣಿ ಕೇಂದ್ರದಲ್ಲಿಯೇ ಬಾಂಗ್ಲಾದೇಶದ ವಲಸಿಗರಿಗೆ ನಕಲಿ ದಾಖಲೆ ಮೂಲಕ ಆಧಾರ್‌ ಕಾರ್ಡ್‌ ನೀಡುತ್ತಿರುವ ಬಗ್ಗೆ ಪತ್ತೆಯಾಗಿದೆ. ಪುಡಿಗಾಸಿನ ಆಸೆಗೆ ದೇಶದ್ರೋಹಿಗಳು ಇಂತಹ ಕೆಲಸ ಮಾಡುತ್ತಿದ್ದಾರೆ ಎಂದರು.
ಬೇಲೂರು ತಾಲೂಕು ಸಮಾಜ ಕಲ್ಯಾಣಾಧಿಕಾರಿಯ ವರ್ಗಾವಣೆ ಮಾಡಿ
ಬಿಕ್ಕೋಡು ವಸತಿ ನಿಲಯದಲ್ಲಿ ಧೂಮಪಾನ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಮಾನವ ಹಕ್ಕುಗಳ ಒಕ್ಕೂಟದ ಸದಸ್ಯರು ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸರ್ಕಾರ ವಾಹನದ ಜೊತೆ ಎಲ್ಲಾ ರೀತಿಯ ಸೌಲಭ್ಯವನ್ನು ಕೊಟ್ಟಿರುವುದು ವಿದ್ಯಾರ್ಥಿಗಳಿರುವ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಗಮನಿಸಿ ಎಂದರು.
ಕಾಫಿ ಬೆಳೆ ತುಳಿದು ಹಾಳು ಮಾಡಿದ ಕಾಡಾನೆಗಳು
ಕಡೇಗರ್ಜೆ ಬಳಿಯ ಗುಡ್‌ಬೆಟ್ಟ ಎಸ್ಟೇಟ್ - ಬಾಳೇಗದ್ದೆ ವ್ಯಾಪ್ತಿಗೊಳಪಡುವ ಹಲವಾರು ಜಮೀನುಗಳಿಗೆ ಲಗ್ಗೆಯಿಟ್ಟ ಕಾಡಾನೆಗಳ ಗುಂಪು ಲಕ್ಷಾಂತರ ಮೌಲ್ಯದ ಅಡಿಕೆ, ಕಾಫಿ, ಬಾಳೆ ತುಳಿದು ಹಾಳುಮಾಡಿವೆ. ಕಳೆದ ಹದಿನೈದು ದಿನಗಳಿಂದ ಬೀಡುಬಿಟ್ಟಿರುವ ಕಾಡಾನೆಗಳಿಂದ ಅಡಿಕೆ, ಕಾಫಿ ನಾಶವಾಗಿದೆ. ಗುಡ್ಬೆಟ್ಟ ಎಸ್ಟೇಟ್ ೪೦೦ ಎಕರೆ, ಬಾಳೆಗದ್ದೆ ಎಸ್ಟೇಟ್ ೨೦೦ ಎಕರೆ, ಪಕ್ಕದ ಮುತ್ತಣ್ಣನ ಕಾಡು ೩ ಎಕರೆಯ ಪ್ರದೇಶಗಳು ಆನೆಗಳು ವಿಶ್ರಾಂತಿ ಪಡೆಯುವ ಪ್ರಮುಖ ಸ್ಥಳಗಳಾಗಿದೆ. ಈ ಮೂಲಕ ಅಕ್ಕಪಕ್ಕದ ಸಣ್ಣಪುಟ್ಟ ರೈತರ ಜಮೀನಿಗೆ ಕಾಡಾನೆಗಳು ರಾತ್ರಿ ವೇಳೆ ಬಂದು ಬೆಳೆ ನಾಶ ಮಾಡುತ್ತಿರುವುದು ಸಾಮಾನ್ಯವಾಗಿದೆ. ಮಾಧ್ಯಮಗಳು ರೈತನ ಸಮಸ್ಯೆಗಳನ್ನು ಬಿತ್ತರಿಸುವುದರ ಮೂಲಕ ಸರ್ಕಾರದ ಗಮನ ಸೆಳೆದು ಬಡ ರೈತನ ಪರವಾಗಿ ನಿಲ್ಲಬೇಕಾದ ಅನಿವಾರ್ಯತೆಯಿದೆ.
ಬಿಕ್ಕೋಡಿನ ಹಾಸ್ಟೆಲ್‌ ವಾರ್ಡನ್‌ ಅಮಾನತಿಗೆ ಆದೇಶ
ಬಿಕ್ಕೋಡಿನ ಡಾ. ಬಿ. ಆರ್ ಅಂಬೇಡ್ಕರ್‌ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಬೀಡಿ ಸೇದುತ್ತಿರುವುದು, ನಿಲಯದ ಮೇಲ್ಛಾವಣೆ ಮೇಲೆ ಮದ್ಯದ ಖಾಲಿ ಬಾಟಲಿಗಳ ಫೋಟೋ, ಕೆಲವು ವಿದ್ಯಾರ್ಥಿಗಳು ವೈಟ್ನರ್‌ ವಾಸನೆ ಸೇವನೆ ಮಾಡುತ್ತಿರುವ ಹಾಗೂ ನಿಲಯ ಪಾಲಕರ ಮೇಲೆ ವಿದ್ಯಾರ್ಥಿಯೋರ್ವ ಹಲ್ಲೆ ಮಾಡುತ್ತಿರುವ ವಿಡಿಯೋ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಗೆ ವಾಟ್ಸಾಪ್‌ ಮೂಲಕ ಬಂದಿತ್ತು. ಅದರಂತೆ ಬೇಲೂರಿನ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಜಿಲ್ಲಾ ಸಮಾಜಕಲ್ಯಾಣಾಧಿಕಾರಿ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲಿಸಿ ವಿದ್ಯಾರ್ಥಿಗಳನ್ನು ಮತ್ತು ಸಿಬ್ಬಂದಿಯನ್ನು ಈ ಸಂಬಂಧ ವಿಚಾರಣೆ ನಡೆಸಲಾಗಿ, ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತು ಮಾಡುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಆದೇಶ ಮಾಡಿದ್ದಾರೆ.
ಹೊಳೆನರಸೀಪುರ ಮೆಟ್ರಿಕ್‌ ನಂತರದ ಹಾಸ್ಟೆಲ್‌ ವಾರ್ಡನ್‌ ವರ್ಗಾವಣೆ ಮಾಡಿ
ಹೊಳೆನರಸೀಪುರ ತಾಲೂಕಿನ ಸಮಾಜಕಲ್ಯಾಣ ಇಲಾಖೆ ಮೆಟ್ರಿಕ್ ನಂತರ ಬಾಲಕೀಯರ ವಿದ್ಯಾರ್ಥಿನಿಲಯ ಅವ್ಯವಸ್ಥೆ ಕೂಪವಾಗಿದೆ. ಶೌಚಾಲಯ, ಕುಡಿಯುವ ನೀರು, ಗ್ರಂಥಾಲಯ ಮತ್ತು ಕೊಠಡಿಗಳು ಸೇರಿದಂತೆ ಯಾವುದೇ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ ಶೈಕ್ಷಣಿಕ ವಾತಾವರಣವಿಲ್ಲದೆ ಹೆಚ್ಚು ಸಮಸ್ಯೆಗಳನ್ನು ಪ್ರತಿನಿತ್ಯ ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳ ಬಗ್ಗೆ ನಿಲಯಪಾಲಕರಾದ ಚಂದ್ರಿಕಾರವರಿಗೆ ಹಲವು ಬಾರಿ ಬಗೆಹರಿಸುವಂತೆ ಒತ್ತಾಯಿಸಿದರೂ ಸಮಸ್ಯೆಗಳನ್ನು ಬಗೆಹರಿಸುವ ಬದಲು ಮಕ್ಕಳ ಮೇಲೆ ಧಮ್ಕಿ ಹಾಕಿ ಬೆದರಿಕೆ ದೌರ್ಜನ್ಯವೆಸಗುತ್ತಿದ್ದಾರೆ. ಈ ಹಾಸ್ಟೆಲ್ ವಾರ್ಡನ್‌ ಅವರನ್ನು ವರ್ಗಾವಣೆ ಮಾಡಿ ಹಾಸ್ಟೆಲ್‌ ವ್ಯವಸ್ಥೆ ಸುಧಾರಿಸುವಂತೆ ಎಸ್‌ಎಫ್ಐ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಾಮನ್‌ವೆಲ್ತ್ ಪವರ್ ಲಿಪ್ಟಿಂಗ್ ಸ್ಪರ್ಧೆ ತೆರಳು ಸಂತೋಷ್‌ ಶೆಟ್ಟಿಗೆ ಹಣಕಾಸಿನ ತೊಂದರೆ
ಅಂತಾರಾಷ್ಟ್ರೀಯ ಪವರ್‌ ಲಿಫ್ಟಿಂಗ್ ಕ್ರೀಡಾಪಟು ಸಂತೋಷ್ ಶೆಟ್ಟಿ ಕಾಮನ್‌ವೆಲ್ತ್ ಪವರ್‌ ಲಿಫ್ಟಿಂಗ್‌ ಸ್ಪರ್ಧೆಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದು, ಕಾಮನ್‌ವೆಲ್ತ್ ಪವರ್‌ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದು, ಆರ್ಥಿಕವಾಗಿ ಧನ ಸಹಾಯ ಮಾಡುವ ಮೂಲಕ ಕ್ರೀಡಾಪಟುವಿಗೆ ಸಹಕಾರ ನೀಡುವಂತೆ ಪವರ್‌ ಲಿಪ್ಟಿಂಗ್ ಅಸೋಸಿಯೇಷನ್ ಸಹ ಕಾರ್ಯದರ್ಶಿ ನಿರಂಜನ್ ಅರಸು ಹಾಗೂ ಅಂತಾರಾಷ್ಟ್ರೀಯ ಪವರ್‌ ಲಿಫ್ಟಿಂಗ್ ಕ್ರೀಡಾಪಟು ಸಂತೋಷ್ ಶೆಟ್ಟಿ ಮನವಿ ಮಾಡಿದರು.
  • < previous
  • 1
  • ...
  • 348
  • 349
  • 350
  • 351
  • 352
  • 353
  • 354
  • 355
  • 356
  • ...
  • 553
  • next >
Top Stories
ಕಬ್ಬು ದರ ಹೆಚ್ಚಳಕ್ಕೆ ಕೇಂದ್ರಕ್ಕೆ ನಿಯೋಗ : ಸಿಎಂ
83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಹುಲಿ ದಾಳಿಗೆ ರೈತ ಬಲಿ: ಬಂಡೀಪುರ, ನಾಗರಹೊಳೆ ಸಫಾರಿ ಬಂದ್‌
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್‌!
ಕಾನೂನಿಂದಷ್ಟೇ ಸಮಾಜ ನಡೆಯಲ್ಲ : ಭಾಗ್ವತ್‌
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved