ಜಾಗರೂಕತೆಯಿಂದ ಮತ ಚಲಾಯಿಸಿ ಬಿಜೆಪಿ ಸಂಚನ್ನು ವಿಫಲಗೊಳಿಸಿ-ಶಾಸಕ ಮಾನೆಆತಂಕದ ವಾತಾವರಣ ಸೃಷ್ಟಿಸಿ, ಜಾತಿ, ಧರ್ಮದ ಭಾವನೆಗಳನ್ನು ಬೇರೆ ರೀತಿಯಾಗಿ ಬಿಂಬಿಸಿ ಜನರನ್ನು ದಾರಿ ತಪ್ಪಿಸುವ ಮೂಲಕ ಮತ ಪಡೆಯುವ ಸಂಚನ್ನು ಬಿಜೆಪಿ ಈ ಬಾರಿಯೂ ರೂಪಿಸಿದ್ದು, ಪ್ರತಿಯೊಬ್ಬರೂ ಸಹ ಜಾಗರೂಕತೆಯಿಂದ ಮತ ಚಲಾಯಿಸುವ ಮೂಲಕ ಬಿಜೆಪಿಯ ಸಂಚನ್ನು ವಿಫಲಗೊಳಿಸಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಕರೆ ನೀಡಿದರು.