ಡೊನೇಶನ್ ವಸೂಲಿ ಮಾಡುತ್ತಿರುವ ಕಾಲೇಜಿನ ಮೇಲೆ ಕ್ರಮಕ್ಕೆ ಆಗ್ರಹಸರ್ಕಾರದ ನಿಯಮಾವಳಿ ಮೀರಿ ಡೊನೇಶನ್ ವಸೂಲಿ ಮಾಡಿ ವಿದ್ಯಾರ್ಥಿನಿ ಭವಿಷ್ಯ ಹಾಳು ಮಾಡುತ್ತಿರುವ ರಾಣಿಬೆನ್ನೂರಿನ ಎಚ್‌ಎಸ್‌ಬಿ ಪಿಯು ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ ಜಿಲ್ಲಾ ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಹಾಗೂ ಡಿಡಿಪಿಯು ಉಮೇಶಪ್ಪ ಎಚ್., ಅವರಿಗೆ ಮನವಿ ಸಲ್ಲಿಸಿದರು.