21 ಜನರಿಗೆ ಸ್ಥಳದಲ್ಲಿಯೇ ಪಿಂಚಣಿ ಮಂಜೂರುಜನಸ್ಪಂದನಾ ಸಭೆಯಲ್ಲಿ ಸಲ್ಲಿಕೆಯಾದ ಸುಮಾರು 120 ಅರ್ಜಿಗಳ ಪೈಕಿ ಪಿಂಚಣಿಗೆ ಸಂಬಂಧಿಸಿದ 21 ಅರ್ಜಿಗಳಿಗೆ ಸ್ಥಳದಲ್ಲಿಯೇ ಬಗೆಹರಿಸಲಾಯಿತು. ಇದರಲ್ಲಿ ವಿಧವಾ ವೇತನ, ವಿಶೇಷ ಚೇತನ ವೇತನ, ಸಂಧ್ಯಾ ಸುರಕ್ಷಾ ವೇತನ, ಹಿರಿಯ ನಾಗರಿಕರ ವೇತನ ಪಿಂಚಣಿ ಸೇರಿವೆ. ಇನ್ನುಳಿದ ಅರ್ಜಿಗಳ ವಿಲೇವಾರಿಗೆ ಸಂಬಂಧ ತಾಲೂಕು ಮಟ್ಟದ ಅಧಿಕಾರಿಗಳಿಗೆ ವರ್ಗಾಯಿಸಲಾಯಿತು.