ಕುಡಿವ ನೀರೊದಗಿಸಲು ಆಗ್ರಹಿಸಿ ಪುರಸಭೆಗೆ ಮುತ್ತಿಗೆಚಿಂಚೋಳಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಚಂದಾಪೂರ ನಗರದ ವಾರ್ಡ್-೧೫ರ ಪಟೇಲ ಕಾಲೋನಿ ನಿವಾಸಿಗಳು ಚರಂಡಿ, ಕುಡಿವ ನೀರು, ವಿದ್ಯುತ್ ದೀಪ, ಸಿಮೆಂಟ್ ರಸ್ತೆ ಇನ್ನಿತರ ಮೂಲ ಸೌಕರ್ಯ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಪುರಸಭೆ ಮುಖ್ಯದ್ವಾರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.