ಅಖಂಡ ಗಂಗಾವತಿ ತಾಲೂಕಿನಲ್ಲಿ 80ರಷ್ಟು ಭತ್ತ ನಾಶ10ರಿಂದ 15 ದಿನಗಳು ಕಳೆದಿದ್ದರೆ ಭತ್ತದ ಫಸಲು ರೈತರ ಕೈ ಸೇರುತ್ತಿತ್ತು. ನೀರಿನ ಅಭಾವ ಉಂಟಾಗುತ್ತದೆ ಎನ್ನುವ ಕಾರಣಕ್ಕೆ ರೈತರು ಏ. 20ರ ವರಿಗೆ ಎಡದಂಡೆ ಕಾಲುವೆಗೆ ನೀರು ಬಿಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದರು. ಆದರೆ, ಕಾಲುವೆಗೆ ನೀರು ಹರಿಯುವುದು ಸ್ಥಗಿತವಾಗುವ ಮೊದಲೇ ಮಳೆ ಮತ್ತು ಆಲಿಕಲ್ಲು ಮಳೆಯಿಂದಾಗಿ ಭತ್ತ ಹಾನಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.