ಸಕ್ಕರೆ ನಾಡು ಮಂಡ್ಯದಲ್ಲೂ ಮೇಲೆದ್ದ ‘ಹಿಂದುತ್ವದ ಅಲೆ’..!ಸ್ವಾತಂತ್ರ್ಯ ಚಳವಳಿ, ಕಾವೇರಿ ಹೋರಾಟ, ರೈತ ಚಳವಳಿಗೆ ಹೆಸರಾಗಿದ್ದ ಮಂಡ್ಯ ಜಿಲ್ಲೆಯೊಳಗೆ ಹಿಂದುತ್ವದ ಅಲೆ ಆಗಾಗ ಮೇಲೇಳುತ್ತಿದೆ. ನೀರಿಗಾಗಿ, ಅನ್ನದಾತರ ಸಮಸ್ಯೆ ವಿರುದ್ಧ ಸಿಡಿದೇಳುತ್ತಿದ್ದ ಸಕ್ಕರೆ ಜಿಲ್ಲೆಯ ಜನರು ಇದೀಗ ಧಾರ್ಮಿಕ ಹೋರಾಟಕ್ಕೆ ಹೆಚ್ಚು ಮನ್ನಣೆ ನೀಡಲಾರಂಭಿಸಿದ್ದಾರೆ. ಮದ್ದೂರಿನಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಸಹಸ್ರಾರು ಸಂಖ್ಯೆಯಲ್ಲಿ ಕಂಡುಬಂದ ಜನಸ್ತೋಮ ಈ ಅನುಮಾನಕ್ಕೆ ಪುಷ್ಠಿ ನೀಡುವಂತಿತ್ತು.