ರಾಷ್ಟ್ರಕ್ಕೆ ಒಳ್ಳೆಯ ಪರಿಸರ ನಿರ್ಮಾಣ ಅಗತ್ಯ: ಕೃಷಿ ಸಚಿವ ಚಲುವರಾಯಸ್ವಾಮಿಹಿರಿಯರಿಗೆ ಪರಿಸರ ಮಾಲಿನ್ಯದ ಅರಿವು ಮೂಡಿಸುವುದಕ್ಕಿಂತಲೂ ವಿದ್ಯಾರ್ಥಿಗಳಿಗೆ ಮಾಲಿನ್ಯದಿಂದ ಉಂಟಾಗುವ ದುಷ್ಪರಿಣಾಮ, ಅನಾನುಕೂಲದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ. ಗಿಡ-ಮರಗಳನ್ನು ಬೆಳೆಸುವುದು, ಅರಣ್ಯ ಸಂರಕ್ಷಣೆ, ನದಿಗಳ ಸ್ವಚ್ಛತೆ ಕಾಪಾಡುವುದನ್ನು ಚಿಕ್ಕ ವಯಸ್ಸಿನಿಂದ ಅವರ ಮನಸ್ಸಿಗೆ ತುಂಬಿದರೆ ಪರಿಸರ ಸಂರಕ್ಷಕರಾಗಿ ಹೊರಹೊಮ್ಮುವರು.