ಪಿಎಸ್‌ಎಸ್‌ಕೆಯಿಂದ ೪.೩೫ ಲಕ್ಷ ಟನ್ ಕಬ್ಬು ಅರೆತ...!ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಸಮೂಹ ಸಂಸ್ಥೆಯ ಒಡೆತನಕ್ಕೆ ನೀಡಿದ ನಂತರ ಪಾಂಡವಪುರ, ಶ್ರೀರಂಗಪಟ್ಟಣ ಹಾಗೂ ಕೆ.ಆರ್.ಪೇಟೆ ತಾಲೂಕಿನ ರೈತರ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಕಾಲದಲ್ಲಿ ಕಾರ್ಖಾನೆಯನ್ನು ಆರಂಭಿಸಿ ಸಮರ್ಪಕವಾಗಿ ಕಬ್ಬನ್ನು ಅರೆದು ನಿಗದಿತ ವೇಳೆಗೆ ಹಣ ಪಾವತಿಸುತ್ತಿರುವುದು ಈ ವ್ಯಾಪ್ತಿಯ ರೈತರಲ್ಲಿ ಖುಷಿ ತಂದಿದೆ.