ಪಾಂಡವಪುರ ಪುರಸಭೆ: 18.67 ಲಕ್ಷ ರು. ಉಳಿತಾಯ ಬಜೆಟ್ ಮಂಡನೆ2002ರ ಜನಗಣತಿ ಪ್ರಕಾರಣದಲ್ಲಿ ಪಾಂಡವಪುರ ಪಟ್ಟಣದಲ್ಲಿ 20 ಸಾವಿರ ಜನಸಂಖ್ಯೆ ಇತ್ತು. ಇದೀಗ ಅದು 30 ಸಾವಿರ ದಾಟಿದೆ. ಆದರೆ, ಹಿಂದಿನ ಸಂಖ್ಯೆಯ ಆಧಾರದಲ್ಲಿ 22 ಲಕ್ಷ ಲೀಟರ್ ನೀರು ಪೂರೈಕೆ ಮಾಡುತ್ತಿದ್ದು, 8 ಲಕ್ಷ ಲೀ ನೀರಿನ ಕೊರತೆ ಇದೆ. ಹಾಗಾಗಿ ಶ್ರೀರಂಗಪಟ್ಟಣದ ಜಾಕ್ವಾಲ್ ಬಳಿ ಹೆಚ್ಚಿನ ಸಮರ್ಥ್ಯದ ಮೋಟಾರ್ ಅಳವಡಿಕೆ ಮಾಡಿ ನೀರು ಪೂರೈಕೆ ಮಾಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.