ರಾಷ್ಟ್ರಕವಿ ಕುವೆಂಪು ಸಾರಿದ್ದು ನಾಸ್ತಿಕವಾದವಲ್ಲ ವಿಚಾರವಾದ: ಡಾ.ಚಂದ್ರು ಕಾಳೇನಹಳದೇವರು ಎಂಬುದು ಒಂದು ಶಕ್ತಿಯ ಅಸ್ತಿತ್ವ. ಪ್ರಕೃತಿಯಲ್ಲಿ ಅಡಗಿರುವ ಶಕ್ತಿ. ಇಲ್ಲಿ ಯಾರು ಮುಖ್ಯರಲ್ಲ ಯಾರು ಅಮುಖ್ಯರಲ್ಲ. ಕುವೆಂಪು ಅವರದ್ದು ವಿಚಾರವಾದ. ಅಪೂರ್ವವಾದದ್ದನ್ನು ಸಾಧಿಸಿದ ಮಹಾನ್ ಚೇತನ. ಸಾಮಾಜಿಕ ನ್ಯಾಯ, ಬೌದ್ಧಿಕ ಪ್ರೌಢಿಮೆ ಕಡಿಮೆ ಇದ್ದ ಸಂದರ್ಭದಲ್ಲಿ ಕುವೆಂಪು ಬಂದರು. ಕಲೆಗಾಗಿ ಕಲೆ, ಸಾಹಿತ್ಯಕ್ಕಾಗಿ ಸಾಹಿತ್ಯ ಎನ್ನುವ ಭಾವ ಮೀರಿ ಜವಾಬ್ದಾರಿ ಮೆರೆದವರು.